ಎಂ.ಬಿ.ಎ ಪ್ರೋಗ್ರಾಂ, ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಮತ್ತು ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಮತ್ತು ರಿಸರ್ಚ್ ಇವರುಗಳ ಸಂಯುಕ್ತಾಶ್ರಯದಲ್ಲಿ `ಪ್ರದ್ಯುತ್’ ಕಾರ್ಯಕ್ರಮವು ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಆಹ್ವಾನಿತರಾಗಿ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಶ್ರೀ ಸ್ವಾಮಿ ತ್ಯಾಗಿಶ್ವರಾನಂದಜೀ ಮಹಾರಾಜ್, ಮುಖ್ಯ ಅತಿಥಿಗಳಾಗಿ ಸರ್ಕಲ್ ಇನ್ಸ್ಪೆಕ್ಟರ್ ಎಸ್. ಬಾಲಚಂದ್ರ ನಾಯಕ್ ಆಗಮಿಸುವರು. ಬಾಪೂಜಿ ಬಿ ಸ್ಕೂಲ್ಸ್ನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಅಧ್ಯಕ್ಷತೆ ವಹಿಸುವರು.
January 22, 2025