ಮಲೇಬೆನ್ನೂರು, ಜ.18- ಹಾಲಿವಾಣ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ವಳೂರು ಕರಿಯಮ್ಮದೇವಿ ಜಾತ್ರೆ ವಿಚಾರವಾಗಿ ಗುರುವಾರ ನಡೆದ ಸಭೆಯ ವೇಳೆ ಮಾತಿನ ಚಕಮಕಿ ನಡೆದು, ಗಲಾಟೆಯಾಗಿರುವ ಬಗ್ಗೆ ವರದಿಯಾಗಿದೆ. ಅಲ್ಲದೇ, ಗಲಾಟೆಯಲ್ಲಿ ಓರ್ವ ವ್ಯಕ್ತಿಗೆ ಪೆಟ್ಟಾಗಿದೆ ಎಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈ ಹಿಂದಿನ ಸಭೆಯ ಪ್ರಕಾರ ಏಪ್ರಿಲ್ 1 ರಿಂದ 10 ರವರೆಗೆ ಗ್ರಾಮದೇವತೆ ಹಬ್ಬ ಆಚರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದು, ಉತ್ಸವಕ್ಕೆ ಪಟ್ಟಿ ಎತ್ತುವ ವಿಷಯದಲ್ಲಿ ವ್ಯತ್ಯಾಸವಾಗಿ ಈ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.
January 11, 2025