ಮಹಿಳಾ ಹೋರಾಟಕ್ಕೆ ಪೂರಕವಾದ ಸಾಂಸ್ಕೃತಿಕ ಚಳವಳಿ ಅಗತ್ಯವಿದೆ

ಮಹಿಳಾ ಹೋರಾಟಕ್ಕೆ ಪೂರಕವಾದ ಸಾಂಸ್ಕೃತಿಕ ಚಳವಳಿ ಅಗತ್ಯವಿದೆ

ಮಹಿಳಾ ಸಮ್ಮೇಳನದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಬಿ.ಟಿ ಜಾಹ್ನವಿ ಅಭಿಮತ

ದಾವಣಗೆರೆ,ಜ.18- ಮಹಿಳಾ ಹೋರಾಟಗಳಿಗೆ ಪೂರಕವಾದ ಸಾಂಸ್ಕೃತಿಕ ಚಳವಳಿಯ ಅಗತ್ಯವಿದೆ, ಮೌಲ್ಯ ಮತ್ತು ನೀತಿಗಳನ್ನು ಹೃದಯದಲ್ಲಿ ನೆಲೆಗೊಳಿಸುವ ಕೆಲಸವನ್ನು ಸಾಹಿತ್ಯ, ಮುಂತಾದ ಕಲಾಪ್ರಕಾರಗಳು ಮಾಡುತ್ತವೆ ಎಂದು ಹಿರಿಯ ಬರಹಗಾರರಾದ ಬಿ.ಟಿ.ಜಾಹ್ನವಿ ಅಭಿಪ್ರಾಯಿಸಿದರು. 

ನಗರದಲ್ಲಿ ಜರುಗಿದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ 7 ನೇ ರಾಜ್ಯ ಮಹಿಳಾ ಸಮ್ಮೇಳನದ  ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಬಂಡಾಯ ಸಾಹಿತಿ ಕಲೀಂ ಭಾಷಾ ಸಮ್ಮೇಳನದ ಸ್ಮರಣ ಸಂಚಿಕೆ  ಬಿಡುಗಡೆ ಮಾಡಿದರು.

ಎಸ್‍ಯುಸಿಐ (ಸಿ) ಪಕ್ಷದ ಪಾಲಿಟ್ ಬ್ಯುರೋ ಸದಸ್ಯ  ಕೆ.ರಾಧಾಕೃಷ್ಣ ಮಾತನಾಡಿ, ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ, ಲೇಖನಗಳನ್ನು ಬರೆಯುತ್ತಾರೆ. ನಾವು ನಾಯಕರನ್ನು ಆರಾಧನೆ ಮಾಡುತ್ತೇವೆ. ಆದರೆ ಇದಾವುದರಿಂದಲೂ ಮಹಿಳೆಯರ ಸಮಸ್ಯೆ ಬಗೆಹರಿದಿಲ್ಲ. ನಾವು ರಾಜಕೀಯವಾಗಿ ಸ್ವತಂತ್ರವಾಗಿದ್ದೇವೆ. ಆದರೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸ್ವಾತಂತ್ರ್ಯ ದೊರಕಿದೆಯೇ? ಇದನ್ನು ಗಹನವಾಗಿ ಆಲೋಚಿಸಬೇಕು ಎಂದರು.

ನಮ್ಮ ಸಮಾಜದಲ್ಲಿನ್ನೂ ಜಾತಿ ಪದ್ಧತಿಯಿದೆ. ಬುದ್ಧನಿಂದ ಆರಂಭವಾಗಿ ಗಾಂಧಿ, ಮುಂತಾದವರೂ ಇದರ ವಿರುದ್ಧ ಧ್ವನಿಯೆತ್ತಿದ್ದಾರೆ. ಆದರೂ ಸಮಸ್ಯೆಗಳು ಕೊನೆಯಾಗಿಲ್ಲ.   ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯಲ್ಲಿ ಮಹಿಳೆಯರ ವಿಮುಕ್ತಿ ಅಡಗಿದೆ. ಅದಕ್ಕೆ ಮಹಿಳೆಯರು ತಯಾರಾಗಬೇಕು ಎಂದು ಅವರು ಕರೆ ನೀಡಿದರು.

ಅಖಿಲ ಭಾರತ ಅಧ್ಯಕ್ಷ  ಕೆಯಾ ಡೇ ಮಾತನಾಡಿ  ಭಾರತ ಬಡತನದ ದೇಶ. ಮಹಿಳೆಯರ ಜೀವನ ಶೋಚನೀಯವಾಗಿದೆ. ಅವರಿಗೆ ಸಮಾನ ಹಕ್ಕುಗಳು ಲಭಿಸಿಲ್ಲ. ಅವರು ಎಲ್ಲಾ ರೀತಿಯ ಶೋಷಣೆಗಳಿಂದ ಮುಕ್ತರಾಗಬೇಕು. ಅದಕ್ಕಾಗಿ ಮಹಿಳೆಯರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ನಂತರ ನೂತನ ರಾಜ್ಯ ಸಮಿತಿಗೆ ಪದಾಧಿಕಾರಿಗ ಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಂ.ಎನ್.ಮಂಜುಳಾ, ಕಾರ್ಯದರ್ಶಿಯಾಗಿ ಎಸ್.ಶೋಭಾ, ಉಪಾಧ್ಯಕ್ಷರಾಗಿ  ಡಾ. ಮೇರಿ ಜಾನ್, ಹರಿಣಿ ಆಚಾರ್ಯ, ಸೀಮಾ ಜಿ.ಎಸ್, ಹೇಮಾವತಿ ಕೆ, ಭಾಗ್ಯಲಕ್ಷ್ಮಿ ಬಿ.ಎಸ್, ಗುಂಡಮ್ಮ, ಆರ್.ಗೀತಾ, ಅಲಕಾ ರಾವ್ ಜಂಟಿ ಕಾರ್ಯದರ್ಶಿಗಳಾಗಿ  ಮಧುಲತಾ ಗೌಡರ್, ಕಲ್ಯಾಣಿ ಎಂ.ವಿ, ಅನುರಾಧ ನಾಯರ್, ನಿರ್ಮಲ ಹೆಚ್.ಎಲ್, ವಿಜಯಲಕ್ಷ್ಮಿ, ರುಕ್ಮಿಣಿ ಆರ್, ಜ್ಯೋತಿ, ಭಾರತಿ, ಶಿವಬಾಳಮ್ಮ, ಗಂಗಾ, ಬನಶ್ರೀ, ರತ್ನಮ್ಮ, ಸೌಮ್ಯ, ಅಭಿಲಾಷ, ಆಸಿಯಾ, ಈಶ್ವರಿ ಮತ್ತು ಖಜಾಂಚಿಯಾಗಿ  ಎ.ಶಾಂತ  ಆಯ್ಕೆಯಾಗಿದ್ದಾರೆ.

error: Content is protected !!