ದಾವಣಗೆರೆ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೇಂದ್ರ, ಐ.ಐ.ಎಸ್.ಸಿ (ಬೆಂಗಳೂರು) ಇವರ ಸಂಯುಕ್ತಾಶ್ರಯದಲ್ಲಿ `ಸಂಶೋಧನಾ ವಿಧಾನ ಮತ್ತು ಐಪಿಆರ್ ಕಾರ್ಯಾಗಾರವು ಇಂದು ಬೆಳಿಗ್ಗೆ 10 ಗಂಟೆಗೆ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಭಾರತೀಯ ವಿಜ್ಞಾನ ಸಂಸ್ಥೆ, ಡಾ. ಟಿ.ವಿ. ಪ್ರಭಾಕರ, ಪ್ರೊ. ಎಚ್. ಎಸ್. ಜಮದಗ್ನಿ, ನಿರ್ದೇಶಕರಾದ ಡಾ. ಕಲೈ ಸಾಕ್ರೆಟಿಸ್, ರಾಜೇಂದ್ರ ಕದಮ್, ಪ್ರೊ. ವೈ. ವೃಷಭೇಂದ್ರಪ್ಪ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಎಚ್. ಬಿ. ಅರವಿಂದ ವಹಿಸುವರು.