ಕಾರ್ಯದರ್ಶಿಯಾಗಿ ಚಂದ್ರಿಕಾ ಮಂಜುನಾಥ್
ದಾವಣಗೆರೆ, ಜ. 16- ಜಿಲ್ಲಾ ಕದಳಿ ಮಹಿಳಾ ವೇದಿಕೆಯ 2024-25 ನೇ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಗಾಯತ್ರಿ ವಸ್ತ್ರದ್, ಕಾರ್ಯದರ್ಶಿಯಾಗಿ ಶ್ರೀಮತಿ ಚಂದ್ರಿಕಾ ಮಂಜುನಾಥ್ ಆಯ್ಕೆಯಾಗಿದ್ದಾರೆ.
ಶ್ರೀಮತಿ ಯಶಾ ದಿನೇಶ್ (ಗೌರವ ಸಲಹೆಗಾರರು), ಗಾಯತ್ರಿ ವಸ್ತ್ರದ್ (ಜಿಲ್ಲಾ ಘಟಕದ ಅಧ್ಯಕ್ಷರು), ಚಂದ್ರಿಕಾ ಮಂಜುನಾಥ್ (ಜಿಲ್ಲಾ ಕಾರ್ಯದರ್ಶಿ), ರತ್ನಾ ಸಿ.ರೆಡ್ಡಿ (ಖಜಾಂಚಿ), ಸೌಮ್ಯ ಸತೀಶ್, ವಾಣಿ ರಾಜ್, ಲಕ್ಷ್ಮಿ ಮಲ್ಲಿಕಾರ್ಜುನ್ (ಸಹ ಕಾರ್ಯದರ್ಶಿಗಳು) ಆಯ್ಕೆಯಾಗಿದ್ದಾರೆ.
ತಾಲ್ಲೂಕು ಘಟಕ : ಮಮತಾ ನಾಗರಾಜ್ (ಅಧ್ಯಕ್ಷರು), ವಿಜಯ ಚಂದ್ರಶೇಖರ್ , (ಉಪಾಧ್ಯಕ್ಷರು), ವಸಂತ (ಕಾರ್ಯದರ್ಶಿ), ವಿಜಯಲಕ್ಷ್ಮಿ ಬಸವರಾಜ್ (ಖಜಾಂಚಿ), ಪೂರ್ಣಿಮಾ ಪ್ರಸನ್ನ ಕುಮಾರ್, ನಂದಿನಿ ಗಂಗಾ ಧರ್ (ಸಹ ಕಾರ್ಯದರ್ಶಿಗಳು) ನೇಮಕ ಗೊಂಡಿದ್ದಾರೆ. ನಿರ್ದೇಶಕರುಗಳನ್ನಾಗಿ ಯಶಾ ದಿನೇಶ್, ಪ್ರಮೀಳಾ ನಟರಾಜ್, ಸುಜಾತ ರವೀಂದ್ರ, ಪಲ್ಲವಿ ಪಾಟೀಲ್, ಆಶಾ ಎಂ. ಪಾಟೀಲ್ ಅವರುಗಳನ್ನು ನೇಮಕ ಮಾಡಲಾಗಿದೆ.