ದಾವಣಗೆರೆ, ಜ.16- ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ಇದೇ ದಿನಾಂಕ 23 ರ ಮಂಗಳವಾರ ಶ್ರೀ ಕರಿಯಮ್ಮ ದೇವಿ ಜಾತ್ರೆ ನಡೆಯಲಿದೆ.
ದಿನಾಂಕ 21 ನೇ ಭಾನುವಾರ ಗಂಗಾಪೂಜೆ, ಹಂದರಗಂಬ ಪೂಜೆ, ದಿನಾಂಕ 22 ನೇ ಸೋಮವಾರ ಕಂಕಣಧಾರಣೆ ನಡೆಯಲಿದೆ.
ದಿನಾಂಕ 23 ನೇ ಮಂಗಳವಾರ ಶ್ರೀ ಕರಿಯಮ್ಮ ದೇವಿ ರಥೋತ್ಸವ ನಡೆಯುವುದು. ದಿನಾಂಕ 24 ನೇ ಬುಧವಾರ ಚರಗ ಚೆಲ್ಲುವುದು, ಹರಕೆ ಒಪ್ಪಿಸುವುದು, ಬಾಯಿಬೀಗ, ಬೇವು ಇತ್ಯಾದಿ ಕಾರ್ಯಕ್ರಮಗಳು ನಡೆಯುವವು. ದಿನಾಂಕ 25 ನೇ ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ದಿನಾಂಕ 26ನೇ ಶುಕ್ರವಾರ ಉಡಿ ತುಂಬುವುದು, ಮಹಾಮಂಗಳಾರತಿ ನಡೆಯಲಿದೆ.