ದಾವಣಗೆರೆ,ಜ.16- ನಗರದ ಕೋಡಿಹಳ್ಳಿ ಕ್ಯಾಂಪಿನ ಶ್ರೀ ಗುರು ಕೊಟ್ಟೂ ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕಂಚಿಕೆರೆ ಶ್ರೀ ಬಿದ್ದ ಹನುಮನ ಮಟ್ಟಿ ವೀರಾಂ ಜನೇಯ ಸ್ವಾಮಿ ಕ್ಷೇತ್ರದ ಶ್ರೀ ಬಸವರಾಜ ಗುರೂಜಿ ಭೇಟಿ ನೀಡಿ ಹಿಮಾಲಯದ ಗಂಗಾ ಜಲದಿಂದ ಪ್ರೋಕ್ಷಿಸಿ ಪೂಜೆ ಮಾಡಿದರು. ಕ್ಯಾಂಪಿನಲ್ಲಿರುವ ಈ ಮಠ ಕೊಟ್ಟೂರಿಗೆ ಪಾದಯಾತ್ರೆ ಮೂಲಕ ತೆರಳುವ ಭಕ್ತರಿಗೆ ಇಲ್ಲಿ ವಿಶ್ರಾಂತಿ ಪಡೆದು ಮುಂದೆ ಸಾಗಲು ಅನುಕೂಲವಾಗಿದೆ ಎಂದು ಶ್ರೀ ಬಸವರಾಜ ಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ಕಣಕುಪ್ಪಿ ಮುರುಗೇಶಪ್ಪ, ಸಂಗಪ್ಪ ತೋಟದ, ಚನ್ನಪ್ಪ, ಪ್ರಭು, ಪ್ರಕಾಶ್ ಹೊಸಮನಿ ಮತ್ತಿತರರು ಉಪಸ್ಥಿತರಿದ್ದರು.
January 11, 2025