`ಮಂದಿರವಲ್ಲೇ ಕಟ್ಟಿದೆವು !’ (ರಾಮ ಜನ್ಮ ಭೂಮಿಗಾಗಿ ನಡೆದ 496 ವರ್ಷಗಳ ಹೋರಾಟ ಪರಿಚಯಿಸುವ ಸಂಗ್ರಹ ಯೋಗ್ಯ ಕೃತಿ) ಯು ಸೋಮೇಶ್ವರ ಶಾಲೆ ಬಳಿಯ ನೇತ್ರಾವತಿ ಕನ್ವೆನ್ಷನ್ ಹಾಲ್ನಲ್ಲಿ ಇಂದು ಬೆಳಿಗ್ಗೆ 11 ಕ್ಕೆ ಬಿಡುಗಡೆಗೊಳ್ಳಲಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾದ ನಾ. ತಿಪ್ಪೇಸ್ವಾಮಿ ಕೃತಿ ಬಿಡು ಗಡೆ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ವಹಿಸು ವರು. ಮುಖ್ಯ ಅತಿಥಿಗಳಾಗಿ ಎನ್. ರಾಜಶೇಖರ್, ಕೆ.ಎಂ. ಸುರೇಶ್, ಜಯರುದ್ರೇಶ್, ರಮೇಶ್ ಕುಮಾರ್ ನಾಯಕ್ ಅವರುಗಳು ಆಗಮಿಸುವರು. ಸಮಾರಂಭದ ಆರಂಭದಲ್ಲಿ `ಅನುಶ್ರೀ’ ಬಳಗದ ಶ್ರೀಮತಿ ವೀಣಾ ಹೆಗಡೆ ತಂಡದಿಂದ ರಾಮನ ಹಾಡುಗಳ ಗಾಯನ ನಡೆಯುವುದು. ಸೋಮೇಶ್ವರ ಪ್ರತಿಷ್ಠಾನದ ಆಶ್ರಯದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.