ಹರಿಹರ ತಾಲ್ಲೂಕು ಗಂಗನರಸಿಯ ಶ್ರೀ ಗೋಣಿ ಬಸವೇಶ್ವರ ಸ್ವಾಮಿ ಹೊರಮಠ, ಶ್ರೀ ಹನುಮಂತ ದೇವರ ಜೀರ್ಣೋದ್ಧಾರ ಸಮಿತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ಎಳ್ಳು ಅಮಾವಾಸ್ಯೆ ವಿಶೇಷ ಪೂಜೆ ನಡೆಯಲಿದೆ.
ಬೆಳಿಗ್ಗೆ 11 ಕ್ಕೆ ಶ್ರೀ ಗೋಣಿ ಬಸವೇಶ್ವರ, ನಾಗದೇವತಾ ಸ್ವಾಮಿಗಳಿಗೆ ವಿಶೇಷ ಪೂಜೆ, ಅಭಿಷೇಕ ನಡೆಯುವುದು. ನಂತರ 11.30 ಕ್ಕೆ ಮಹಾ ಪ್ರಸಾದ ಸೇವೆಯನ್ನು ರಾಣೇಬೆನ್ನೂರು, ಹರಳಯ್ಯನಗರದ ಅಣ್ಣಪ್ಪ ನೀಲಪ್ಪ ಪೂಜಾರ ಏರ್ಪಡಿಸಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಜಿ.ಎಂ. ನಾಗೇಂದ್ರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದ್ದಾರೆ.