ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಕಾಗದ ರಹಿತ ಸೇವೆಗೆ ಅವಕಾಶ

ದಾವಣಗೆರೆ, ಜ. 10 – ಜಿಲ್ಲೆಯ ಅಟಲ್‍ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ವಿವಿಧ ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸ್ನೇಹಿಯಾಗಿ ಕಾಗದ ರಹಿತ  ಸೇವೆಯನ್ನು ನೀಡುವ ಸಲುವಾಗಿ ಈ ಕೆಳಗಿನ ಅಂಶಗಳಲ್ಲಿ ಸೇವೆ ಒದಗಿಸಲು ಕ್ರಮವಹಿಸಲಾಗಿದೆ.

ಅರ್ಜಿ ಸ್ವೀಕರಿಸಿದ ನಂತರ ಅರ್ಜಿದಾ ರರ ಮೊಬೈಲ್ ಸಂಖ್ಯೆಗೆ ಸ್ವೀಕೃತಿ ಎಸ್‍ಎಂಎಸ್‌ ಹಾಗೂ ಅರ್ಜಿದಾರರ ಇ- ಮೇಲ್‍ಗೆ ಸ್ವೀಕೃತಿ ಪತ್ರದ ಪಿಡಿಎಫ್ ಪ್ರತಿಯನ್ನು ಕಳು ಹಿಸಲಾಗುತ್ತಿದೆ. ಅರ್ಜಿಯ ಪ್ರತಿ ಹಂತ ದಲ್ಲಿನ ಪ್ರಕ್ರಿಯೆಯನ್ನು ಹಾಗೂ ಯಾವ ಹಂತದಲ್ಲಿ ಬಾಕಿ ಇದೆ ಎಂಬ ಮಾಹಿತಿ ಯನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಕಳುಹಿಸಲಾಗುವುದು.

ಅರ್ಜಿ ವಿಲೇವಾರಿಯಾದ ನಂತರ, ಸಿದ್ದ ಗೊಂಡ ಪ್ರಮಾಣ ಪತ್ರವನ್ನು ಅರ್ಜಿದಾರರಿ ಗೆ ಈ ಪ್ರಮಾಣ ಪತ್ರದ ಪಿಡಿಎಫ್ ಪ್ರತಿ ಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅರ್ಜಿದಾರರ ಮೊಬೈಲ್‌ಗೆ ಎಸ್‍ಎಂಎಸ್ ಲಿಂಕ್‌ ಕಳುಹಿಸಲಾಗುತ್ತದೆ ಹಾಗೂ ಪ್ರಮಾಣ ಪತ್ರದ ಪಿಡಿಎಫ್ ಪ್ರತಿಯನ್ನು ಅರ್ಜಿದಾರರ ಇ-ಮೇಲ್‍ಗೆ ಕಳುಹಿಸಲಾಗು ತ್ತಿದೆ. ಅರ್ಜಿದಾ ರರು ಪ್ರಮಾಣ ಪತ್ರವನ್ನು ಮುದ್ರಣ ಮಾಡಿ ಕೊಳ್ಳ ಬಹುದು. ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ತಿಳಿಸಿದ್ದಾರೆ.

error: Content is protected !!