ದಾವಣಗೆರೆ ಕೆ.ಟಿ.ಜೆ ನಗರ 2ನೇ ಕ್ರಾಸ್‌ನಲ್ಲಿರುವ ಶ್ರೀ ಗುರು ರೇವಣಸಿದ್ದೇಶ್ವರ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಶನೈಶ್ಚರ, ಶ್ರೀ ನವಗ್ರಹ ಸನ್ನಿಧಿ, ಶ್ರೀ ದುರ್ಗಾದೇವಿ ದೇವಸ್ಥಾನದ ಸೇವಾ ಸಮಿತಿ ಇವುಗಳ ಆಶ್ರಯದಲ್ಲಿ ಕಡೇ ಕಾರ್ತಿಕೋತ್ಸವವನ್ನು ಇಂದು ರಾತ್ರಿ 8.30 ಕ್ಕೆ ಹಮ್ಮಿಕೊಳ್ಳಲಾಗಿದೆ. ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಹಾ ಮಂಗಳಾರತಿ ಹಾಗೂ ಸಂಜೆ 5.30 ಕ್ಕೆ ರಥೋತ್ಸವ ನಡೆಯಲಿದೆ.
January 10, 2025