ದಾವಣಗೆರೆ, ಜ.11- ನಿಟುವಳ್ಳಿಯ ಆದರ್ಶ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ, ಛಂದಸ್ಸು ಅಲಂಕಾರ ಮೊದಲಾದ ಸ್ಪರ್ಧೆಗಳ ಪೂರ್ವಭಾವಿ ಬರವಣಿಗೆ ಪರೀಕ್ಷೆಯನ್ನು ಶ್ರೀ ಸಿದ್ದಗಂಗಾ ಮಕ್ಕಳ ಲೋಕದ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಕೆ.ಎನ್. ಸ್ವಾಮಿ, ಕನ್ನಡದ ಮಹತ್ವ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಕನ್ನಡ ಬಂದರೆ ಉದ್ಯೋಗ ಎಂಬ ಆಜ್ಞೆಯನ್ನು ಸರ್ಕಾರ ಹೊರಡಿಸಬೇಕು ಎಂದು ಮನವಿ ಮಾಡಿದರು. 25 ಬಾಲಕ, ಬಾಲಕಿಯರು ಈ ಲಿಖಿತ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆಯ್ಕೆಯಾದ ಪವಿತ್ರಾ, ಪೂಜಾ, ಸಂಜನಾ, ಸಹನಾ, ಕೊಟ್ರೇಶ್, ಮಲ್ಲಿಕ್ ರೆಹಾನ್, ಪ್ರಿಯಾ ಕೆ.ಹೆಚ್., ಎಸ್. ರಕ್ಷಿತಾ, ಡಿ.ಶೋಭಾಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಶಿಕ್ಷಕ ಕೆ. ಹನುಮಂತಪ್ಪ ಪತ್ತಾರ್ ಉಪಸ್ಥಿತರಿದ್ದರು. ಸ್ಪರ್ಧೆ ಏರ್ಪಡಿಸಿದ್ದ ಕನ್ನಡ ಗುರುಗಳಾದ ಚಂದ್ರಶೇಖರ ರಾ. ಗುತ್ತಲ್ ಅವರಿಗೆ ಸಂಸ್ಥೆ ವತಿಯಿಂದ `ಕನ್ನಡ ಶಿರೋಮಣಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.