ದಾವಣಗೆರೆ, ಜ. 6 – ನಗರದ ಶ್ರೀ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ಇದೇ ದಿನಾಂಕ 9ರ ಮಂಗಳವಾರ ಶ್ರೀ ಕಾಳಿಕಾ ದೇವಿಯ ಕಡೇಕಾರ್ತಿಕೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ ಪ್ರಾತಃ ಕಾಲದಲ್ಲಿ ಶ್ರೀ ಅಮ್ಮನವರಿಗೆ ವೇದೋಕ್ತ ಪಂಚಾಮೃತ ಅಭಿಷೇಕ, ವಿಶ್ವಕರ್ಮ ಅಷ್ಟೋತ್ತರ ಪೂಜೆ, ಪುಷ್ಪಾಲಂಕಾರ, ವಿಶೇಷ ಪೂಜಾ ಅಲಂಕಾರ, ಮಹಾಮಂಗಳಾರತಿ, ರಾತ್ರಿ 8 ಗಂಟೆಗೆ ದೀಪಾರಾಧನೆ, ಕಾರ್ತಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.