ದಾವಣಗೆರೆ, ಜ. 7 – ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಪ್ರತಿ ಮಾಹೆಯ ಶಿಬಿರಗಳ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಮಲೆಬೆನ್ನೂರು ಪುರಸಭೆಗೆ ಸಂಬಂಧಿಸಿದಂತೆ ಚನ್ನಗಿರಿಯಲ್ಲಿ ಇದೇ ದಿನಾಂಕ 11 ರಂದು ನ್ಯಾಮತಿ, ದಿನಾಂಕ 13 ರಂದು ಹರಿಹರ, ಜ.15 ರಂದು ಜಗಳೂರು ದಿನಾಂಕ 21 ರಂದು ಮತ್ತು ದಿನಾಂಕ 24 ರಂದು ಹೊನ್ನಾಳಿ ಆಯಾ ತಾಲ್ಲೂಕಿನ ಎ.ಪಿ.ಎಂ.ಸಿ ಆವರಣದಲ್ಲಿ ಪ್ರತಿ ಮಾಹೆಯು ನಿಗದಿತ ದಿನಾಂಕಗಳಂದು ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಸ್. ಪ್ರಮುತೇಶ್ ತಿಳಿಸಿದ್ದಾರೆ.
July 23, 2024