ಮಲೇಬೆನ್ನೂರು, ಜ.8- ಕುಂಬಳೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶ್ರೀಮತಿ ಸುವರ್ಣಮ್ಮ ಗಂಗಾಧರ್ ಮತ್ತು ಉಪಾಧ್ಯಕ್ಷರಾಗಿ ಕೆ.ಚಿಕ್ಕಣ್ಣ ಅವರು ಇಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾದ ಕೆ.ಎಸ್.ಉಮಾಪತಿ, ಹೆಚ್.ರಮೇಶ್, ಹಳೇಮನೆ ಸಿದ್ದಪ್ಪ, ಎನ್.ಆಂಜನೇಯ, ಕೆ.ಮಹೇಂದ್ರಪ್ಪ, ಕೆ.ಜಿ.ಕರಿಬಸಪ್ಪ, ಶ್ರೀಮತಿ ಸುಮಂಗಳಮ್ಮ ಉಮಾಪತಿ, ಆರ್.ಹನುಮೇಶಿ, ಗಾಳೆವ್ವರ ಕುಬೇರಪ್ಪ ಮತ್ತು ಸಂಘದ ಕಾರ್ಯದರ್ಶಿ ಮಂಜುನಾಥ್, ಸಹಾಯಕ ಜಗದೀಶ್ ಈ ವೇಳೆ ಹಾಜರಿದ್ದರು.