ನಾಗನೂರಿನಲ್ಲಿ ಇಂದು-ನಾಳೆ ಉಮಾ ಮಹೇಶ್ವರ ಜಾತ್ರೆ

ನಾಗನೂರಿನಲ್ಲಿ ಇಂದು-ನಾಳೆ  ಉಮಾ ಮಹೇಶ್ವರ ಜಾತ್ರೆ

ದಾವಣಗೆರೆ ತಾಲ್ಲೂಕು ನಾಗನೂರು ಗ್ರಾಮದಲ್ಲಿ ಶ್ರೀ ಉಮಾ ಮಹೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಇಂದು ಮತ್ತು ನಾಳೆ ನಡೆಯಲಿದೆ. ಇಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಸ್ವಾಮಿ ಮತ್ತು ಗುರುಗಳ ಆಗಮನದೊಂದಿಗೆ ಉರುಳು ಸೇವೆ ಮಾಡುವವರಿಗೆ ನೀರು ಹಾಕುವುದು. 

ಅದೇ ಸಮಯದಲ್ಲಿ ಹೆಣ್ಣುಮಕ್ಕಳು ಉರುಳು ಸೇವೆ ಮಾಡುವವರಿಗೆ ನೀರು ಹಾಕುವುದು. ಶ್ರೀ ಸ್ವಾಮಿಯನ್ನು ತೋಟದ ಮಠಕ್ಕೆ ಕರೆದೊಯ್ಯುವುದು. ನಂತರ ಮಠದಲ್ಲಿ ಗಂಗಾ ಪೂಜೆ ಮುಗಿಸಿ ಪ್ರಸಾದ ವಿನಿಯೋಗ ಆರಂಭ. ಮಧ್ಯಾಹ್ನ ಬೆಲ್ಲದ ಬಂಡಿ  ಮೆರವಣಿಗೆ ನಡೆಯಲಿದೆ. ರಾತ್ರಿ 7 ರಿಂದ ಶ್ರೀ ದುರುಗಮ್ಮನ ಕಾರ್ತಿಕೋತ್ಸವ ಜರುಗುವುದು.

ನಾಳೆ ಬುಧವಾರ ಬೆಳಿಗ್ಗೆ 8 ರಿಂದ 3 ಗಂಟೆಯವರೆಗೆ ಮಠದಲ್ಲಿ ಪ್ರಸಾದ ವಿನಿಯೋಗ, ಮಧ್ಯಾಹ್ನ 12 ಗಂಟೆಯಿಂದ ವಾದ್ಯಗಳೊಂದಿಗೆ ಎತ್ತುಗಳ ಮೆರವಣಿಗೆ, 4 ಗಂಟೆಗೆ ಭಕ್ತಾದಿಗಳು ಮುಡುಪು, ಹರಕೆಯನ್ನು ಅರ್ಪಿಸುವುದು ಮತ್ತು ಗ್ರಾಮಸ್ಥರೆಲ್ಲರೂ ಸೇರಿ ಅದ್ಧೂರಿಯ ಮೆರವಣಿಗೆಯೊಂದಿಗೆ ಊರೊಳಗೆ ಬರಮಾಡಿಕೊಳ್ಳುವುದು. ಅಗಸಿ ಬಾಗಿಲಿನಲ್ಲಿ ಸ್ವಾಮಿಯ ಬಾವುಟ ಹರಾಜು ನಡೆಯಲಿದೆ. ನಂತರ ಭಕ್ತರಿಗೆ ಪ್ರಸಾದ ಹಮ್ಮಿಕೊಳ್ಳಲಾಗಿದೆ ಎಂದು ಎ.ಹೆಚ್‌. ವಸಂತಕುಮಾರ್‌, ಜೆ. ಉಮೇಶ್, ಎ. ಹನುಮಂತಪ್ಪ ತಿಳಿಸಿದ್ದಾರೆ.

error: Content is protected !!