ಸುಲಿಗೆ ನಡೆದ 5 ಗಂಟೆಯಲ್ಲಿಯೇ ಆರೋಪಿಯನ್ನು ಬಂಧಿಸಿದ ಪೊಲೀಸರು

1.35 ಲಕ್ಷ ರೂ. ಬೆಲೆ ಬಾಳುವ  ಸ್ವತ್ತು ವಶ 

ದಾವಣಗೆರೆ, ಜ.8- ಡ್ರಾಪ್ ಕೇಳುವ ನೆಪದಲ್ಲಿ ಸುಲಿಗೆ ಮಾಡಿದ್ದ ಆರೋಪಿಯನ್ನು ದೂರು ದಾಖಲಾದ ಐದು ಗಂಟೆಯಲ್ಲಿಯೇ ಬಂಧಿಸಿ, ಆತನಿಂದ 1.35 ಲಕ್ಷ ರೂ. ಬೆಲೆಯ ಸ್ವತ್ತು ವಶಪಡಿಸಿಕೊಂಡಿದ್ದಾರೆ.

ಅಜಾದ್ ನಗರದ ಬೂದಾಳ್ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರದ ವಾಸಿ ಹಸನ್ ಅಲಿ ಬಂಧಿತ ಆರೋಪಿಯಾಗಿದ್ದು, ಮತ್ತೊಬ್ಬ ಆರೋಪಿ ಪತ್ತೆ ಕಾರ್ಯವನ್ನು ಪೊಲೀಸರು ಮುಂದುವರೆಸಿದ್ದಾರೆ.

ಇದೇ ದಿನಾಂಕ 4ರಂದು ಸಂಜೆ 5 ಗಂಟೆ ವೇಳೆಗೆ ಜಿಎಂಐಟಿ ಕಾಲೇಜು ವಿದ್ಯಾರ್ಥಿ ಹರ್ಷಿತ್ ಕಾಲೇಜಿನಲ್ಲಿ ಇಂಟರ್ನಲ್ ಪರೀಕ್ಷೆ ಮುಗಿಸಿಕೊಂಡು ತನ್ನ ಬೈಕಿನಲ್ಲಿ ಹಾಗು ಮತ್ತೊಂದು ಬೈಕ್‌ನಲ್ಲಿ ಬಸವರಾಜ್ ಹಾಗೂ ಸ್ಟೀಫನ್ ಸ್ನೇಹಿತರು ಮನೆಗೆ ಹೋಗುತ್ತಿದ್ದಾಗ, ಅದೇ ಕಾಲೇಜಿನ ಹಿರಿಯ ವಿದ್ಯಾರ್ಥಿ ಅಲಿ ಡ್ರಾಪ್ ಕೇಳಿ ಕಿಯಾ ಷೋರೂಂ ಪಕ್ಕದ ಖಾಲಿ  ಸೈಟುಗಳ ಬಳಿ ಕರೆದುಕೊಂಡು ಹೋಗಿ ಬೈಕ್ ನಿಲ್ಲಿಸಲು ಹೇಳಿದ್ದ.

ಬೈಕ್ ನಿಂತ ತಕ್ಷಣ ರಸ್ತೆಯಲ್ಲಿ ಗಿಡದ ಕೆಳಗೆ ಕೂತಿದ್ದ ವ್ಯಕ್ತಿ ತನ್ನ ಚಾಕು ತೋರಿಸಿ ಸ್ಟೀಫನ್ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು, ಹರ್ಷಿತ್ ಕೊರಳಿನಲ್ಲಿದ್ದ 10 ಗ್ರಾಂ ಬಂಗಾರದ ಚೈನ್ ಕಿತ್ತುಕೊಂಡು, ಅಲಿಗೆ ಡ್ರಾಪ್ ಮಾಡು ಎಂದು ಹೇಳಿ ಸ್ಟೀಫನ್ ಮೊಬೈಲನ್ನು ವಾಪಾಸ್‌ ಕೊಟ್ಟಿದ್ದಾನೆ. ಅಲಿ ಆ ವ್ಯಕ್ತಿಯನ್ನು ಡ್ರಾಪ್ ಮಾಡಿ ವಾಪಾಸ್ ಬಂದು ಬೈಕ್ ಕೊಟ್ಟಿದ್ದಾನೆ. ಈ ಕುರಿತು ಹರ್ಷಿತ್ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿ ಪತ್ತೆ ಕಾರ್ಯದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಭಾವತಿ.ಸಿ.ಶೇತಸನದಿ, ಪಿಎಸ್‌ಐ ವಿಶ್ವನಾಥ್ ಹೆಚ್.ಎಸ್., ವಿಜಯ್ ಎಂ., ಸಿಬ್ಬಂದಿಗಳಾದ ಆನಂದ ಮುಂದಲಮನಿ, ಮಲ್ಲಿಕಾರ್ಜುನ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಯೋಗೀಶ್ ನಾಯ್ಕ, ಗೋಪಿನಾಥ ಬಿ. ನಾಯ್ಕ, ಮಂಜುನಾಥ ಬಿ.ವಿ ಇದ್ದರು.

error: Content is protected !!