ಡಿಡಿಸಿಸಿ ಬ್ಯಾಂಕ್‌ ಚುನಾವಣೆ : ಮಾಯವಾದ ಮತದಾರರ ಪಟ್ಟಿ

ದಾವಣಗೆರೆ, ಜ.7- ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಇದೇ ದಿನಾಂಕ 25 ರಂದು ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ಪ್ರಕಟಗೊಂಡಿದ್ದ ಅಂತಿಮ ಮತದಾರರ ಪಟ್ಟಿಯನ್ನು ಬ್ಯಾಂಕಿನ ಸೂಚನಾ ಫಲಕದಲ್ಲಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಮಾಯವಾಗಿದೆ.

ನಗರದಲ್ಲಿರುವ ಡಿಡಿಸಿಸಿ ಬ್ಯಾಂಕ್‌ನ ಸೂಚನಾ ಫಲಕದಲ್ಲಿ ಬ್ಯಾಂಕಿನ 13 ಕ್ಷೇತ್ರಗಳಿಗೆ ಸಂಬಂಧಿಸಿದ ಅಂತಿಮ ಮತದಾರರ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಹಾಕಿದ ಕೆಲವೇ ನಿಮಿಷಗಳಲ್ಲಿ ಆ ಪಟ್ಟಿಯನ್ನು ಕಿತ್ತು ಹಾಕಲಾಗಿದೆ ಎಂದು ಮತದಾರರಲ್ಲೊಬ್ಬರಾದ ಜಿಲ್ಲಾ ಜೆಡಿಎಸ್ ಮುಖಂಡ ಎಂ.ಎನ್. ನಾಗರಾಜ್ ಆರೋಪಿಸಿದ್ದಾರೆ.

ಈ ಪಟ್ಟಿಯನ್ನು ಹರಿದು ಹಾಕಿರುವುದು ಬ್ಯಾಂಕಿನ ಸೂಚನಾ ಫಲಕದ ಕೆಳಗೆ ಪೇಪರ್‌ ತುಣುಕುಗಳು ಸಾಕ್ಷಿಯಾಗಿ ಬಿದ್ದಿವೆ. ಈ ಎಲ್ಲ ದೃಶ್ಯಾವಳಿಗಳು ಬ್ಯಾಂಕ್‌ನ ಸಿಸಿ ಟಿವಿಯಲ್ಲಿ ದಾಖಲಾಗಿವೆ. ಈ ಬಗ್ಗೆ ಬ್ಯಾಂಕಿನ ಆಡಳಿತಾಧಿಕಾರಿಗಳು ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.

error: Content is protected !!