ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ನಾಳೆ ಕಡೇ ಕಾರ್ತಿಕೋತ್ಸವ

ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ನಾಳೆ ಕಡೇ ಕಾರ್ತಿಕೋತ್ಸವ

ದಾವಣಗೆರೆ, ಜ.7- ನಗರದ ಕಾಳಿಕಾದೇವಿ ರಸ್ತೆಯ ಲ್ಲಿರುವ ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 9 ರ ಮಂಗಳವಾರ ಶ್ರೀ ಕಾಳಿಕಾ ದೇವಿಯ ಕಡೇಕಾರ್ತಿ ಕೋತ್ಸವ ಕಾರ್ಯಕ್ರಮ  ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ ಪ್ರಾತಃಕಾಲ ಶ್ರೀ ಅಮ್ಮನವರಿಗೆ ವೇದೋಕ್ತ ಪಂಚಾಮೃತ ಅಭಿಷೇಕ, ವಿಶ್ವಕರ್ಮ ಅಷ್ಟೋತ್ತರ ಪೂಜೆ, ಪುಷ್ಪಾಲಂಕಾರ, ವಿಶೇಷ ಪೂಜಾ ಅಲಂಕಾರ, ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿವೆ. ರಾತ್ರಿ 8 ಗಂಟೆಗೆ ದೀಪಾರಾಧನೆ, ಕಡೇ ಕಾರ್ತಿಕೋತ್ಸವ ಹಮ್ಮಿಕೊಳ್ಳಲಾಗಿದೆ.  

error: Content is protected !!