9ರಂದು ಶ್ರೀ ಕಟ್ಟೆ ದುರುಗಮ್ಮದೇವಿ ಕಡೇ ಕಾರ್ತಿಕೋತ್ಸವ

9ರಂದು ಶ್ರೀ ಕಟ್ಟೆ ದುರುಗಮ್ಮದೇವಿ ಕಡೇ ಕಾರ್ತಿಕೋತ್ಸವ

ದಾವಣಗೆರೆ, ಜ. 5 – ನಗರದ ಹೊಂಡದ ರಸ್ತೆಯ ಶ್ರೀ ಕಟ್ಟೆ ದುರುಗಮ್ಮದೇವಿ ದೇವಸ್ಥಾನದಲ್ಲಿ ಶ್ರೀ ಕಟ್ಟೆ ದುರುಗಮ್ಮದೇವಿಯ ಮಂಡಲ ಪೂಜಾ ಕಾರ್ಯಕ್ರಮವು ನಾಡಿದ್ದು ದಿನಾಂಕ 7ರ ಬೆಳಿಗ್ಗೆ 9 ಗಂಟೆಗೆ ಶ್ರೀ ದೇವಿಯ ಅಭಿಷೇಕ ಮತ್ತು ಮಹಾ ಮಂಗಳಾರತಿ, ನಂತರ ಮಧ್ಯಾಹ್ನ 12 ಕ್ಕೆ ಪ್ರಸಾದ ವಿತರಣೆ ನಡೆಯುತ್ತದೆ. ಕಾರ್ಯಕ್ರಮವು ದೇವಸ್ಥಾನದ ಪೌರೋಹಿತ್ಯರ ಸಮ್ಮುಖದಲ್ಲಿ ನೆರವೇರುವುದು.  ಇದೇ ದಿನಾಂಕ 9ರ ಮಂಗಳವಾರ ದೇವಿಯ ಕಡೇ ಕಾರ್ತಿಕೋತ್ಸವವು ರಾತ್ರಿ 8 ಗಂಟೆಗೆ ನಡೆಯಲಿದೆ. ಭಕ್ತಾದಿಗಳು ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಟ್ರಸ್ಟ್‍ನವರು ತಿಳಿಸಿದ್ದಾರೆ.

error: Content is protected !!