ಅತಿಥಿ ಉಪನ್ಯಾಸಕರ ಖಾಯಂಗೆ ಎಎಪಿ ಜಿಲ್ಲಾ ಸಮಿತಿ ಒತ್ತಾಯ

ದಾವಣಗೆರೆ, ಜ.5- ರಾಜ್ಯದಲ್ಲಿ ಶ್ರಮ ವಹಿಸಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಅತಿಥಿ ಉಪನ್ಯಾಸಕರನ್ನು ಸರ್ಕಾರ ಕೂಡಲೇ ಖಾಯಂ ಗೊಳಿಸಬೇಕೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕ ಒತ್ತಾಯಿಸಿದೆ.

ಅತಿಥಿ ಉಪನ್ಯಾಸಕರು ಅತಿ ಕಡಿಮೆ ವೇತನದಲ್ಲಿ ತಮ್ಮ ವಿದ್ಯೆಯನ್ನು ದಾನ ಮಾಡಿ, ವಿದ್ಯಾರ್ಥಿಗಳ ಮತ್ತು ರಾಜ್ಯದ ಏಳಿಗೆಗಾಗಿ ಹಗಲು – ರಾತ್ರಿ ಲೆಕ್ಕಿಸದೇ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ಪ್ರಪಂಚದಲ್ಲಿ ದೊಡ್ಡ ಹುದ್ದೆಯಲ್ಲಿದ್ದು ಮತ್ತು ಹೆಚ್ಚು ಸಂಬಳ ಪಡೆದು ಜೀವಿಸಲು ಗುರುಗಳ ವಿದ್ಯಾದಾನವೇ ಕಾರಣ ಎಂದು ಸರ್ಕಾರ ಈಗಾಗಲೇ ತಿಳಿದಿರುತ್ತದೆ. ಆದರೆ, ಅಂತಹ ಗುರುಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್. ಶಿವಕುಮಾರಪ್ಪ ದೂರಿದ್ದಾರೆ.

ಈಗಾಗಲೇ ಕೆಲವು ರಾಜ್ಯಗಳಲ್ಲಿ ಅದರಲ್ಲೂ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿರುವ ರಾಜ್ಯದಲ್ಲಿ ಯಾವ ಅತಿಥಿ ಉಪನ್ಯಾಸಕರು ಇರುವುದಿಲ್ಲ. ಇದ್ದರೆ ಅವರೆಲ್ಲರನ್ನೂ ಖಾಯಂಗೊಳಿಸಿ, ಅವರಿಗೆ ಖಾಯಂ ಉಪನ್ಯಾಸಕರ ಹಾಗೆಯೇ ವೇತನ ಕೊಡಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಹ ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸಿ, ಉತ್ತಮ ವೇತನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

error: Content is protected !!