ಡಿಆರ್‌ಎಂ ಕಾಲೇಜಿನಲ್ಲಿ ಇಂದು ಪುರಸ್ಕಾರ

ಧ.ರಾ.ಮ. ವಿಜ್ಞಾನ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಇಂದು ಬೆಳಿಗ್ಗೆ 10 ಕ್ಕೆ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರವನ್ನು ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.  ಮುಖ್ಯ ಅತಿಥಿಗಳಾಗಿ ಕರಿಸಿದ್ದಪ್ಪ ಎಸ್‌.ಜಿ., ಡಾ. ಉಷಾ ಎಂ.ಜಿ ಆಗಮಿಸುವರು. ಕಾರ್ಯ ಕ್ರಮದಲ್ಲಿ ಡಾ. ಆರ್‌. ವನಜಾ ಉಪಸ್ಥಿತ ರಿರುವರು. ಪ್ರಾಂಶುಪಾಲ ಜೆ. ಶಿವಪ್ಪ ಅಧ್ಯಕ್ಷತೆ ವಹಿಸುವರು ಸಂಚಾಲಕರಾಗಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶೋಭಾ ಟಿ. ಆಗಮಿಸುವರು.

error: Content is protected !!