ದಾವಣಗೆರೆ, ಜ.5- ಭಗವತಿ ಚೈತನ್ಯ ಚಿಕಿತ್ಸೆ ಮತ್ತು ಧ್ಯಾನ ಕೇಂದ್ರ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಶ್ರೀ ಗಾಯತ್ರಿ ಪರಿವಾರ ಇವರುಗಳ ಸಂಯುಕ್ತಾಶ್ರಯದಲ್ಲಿ ಮಹಾಧ್ಯಾನ ಶಿಬಿರದ ಉದ್ಘಾಟನಾ ಸಮಾರಂಭ ನಾಡಿದ್ದು ದಿನಾಂಕ 7 ರ ಸಂಜೆ 5 ಗಂಟೆಗೆ ನಗರದ ಎಂಸಿಸಿ `ಬಿ’ ಬ್ಲಾಕ್ 2ನೇ ಮುಖ್ಯರಸ್ತೆ, 1ನೇ ತಿರುವಿನಲ್ಲಿರುವ ಭಗವತಿ ಚೈತನ್ಯ ಚಿಕಿತ್ಸೆ ಮತ್ತು ಧ್ಯಾನ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಅಘೋರಿ ಚಿದಂಬರ ಯೋಗಿ ಉದ್ಘಾಟಿಸುವರು. ಸಾಲಿಗ್ರಾಮ ಗಣೇಶ್ ಶೆಣೈ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಚಂದ್ರಶೇಖರ್, ಕೆ.ಹೆಚ್. ಮಂಜುನಾತ್, ಜ್ಯೋತಿ ಗಣೇಶ್ ಶೆಣೈ, ಹೇಮಾ ಶಾಂತಪ್ಪ ಪೂಜಾರಿ ಭಾಗವಹಿಸುವರು.
January 11, 2025