ದಾವಣಗೆರೆ : ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರವು ಇಂದಿ ನಿಂದ ದಿನಾಂಕ 12 ರವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ತಾಲ್ಲೂಕಿನ ಹೊಸಬಿಸಲೇರಿ ಗ್ರಾಮದಲ್ಲಿ ನಡೆಯಲಿದೆ.
ಇಂದು ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವನ್ನು ಶಾಸಕ ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದು, ಶ್ರೀ ದೇವರಾಜ ಅರಸು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಭರತ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಡಿ.ಅಣ್ಣಯ್ಯ ಉಪಸ್ಥಿತರಿರುವರು. ಕಾರ್ಯ ಕ್ರಮ ಸಂಯೋಜನಾಧಿಕಾರಿ ಡಾ. ಅಶೋಕಕುಮಾರ್ ವಿ.ಪಾಳೇದ್, ಗ್ರಾ.ಪಂ ಅಧ್ಯಕ್ಷರಾದ ಪೂಜಾ, ಉಪಾ ಧ್ಯಕ್ಷರಾದ ಮಂಜಮ್ಮ ಮತ್ತಿತರರು ಪಾಲ್ಗೊಳ್ಳುವರು.
ನಾಳೆ ದಿನಾಂಕ 7 ರಿಂದ 11 ರವರೆಗೆ ಹಲವು ಗಣ್ಯರ ನೇತೃತ್ವದಲ್ಲಿ ಕಾರ್ಯಕ್ರಮಗಳು ಮತ್ತು ಅರಿವು ಕಾರ್ಯಾಗಾರ ಜರುಗಲಿದ್ದು, ಇದೇ ದಿನಾಂಕ 12 ರಂದು ಬೆಳಿಗ್ಗೆ 11 ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಎಂ.ಡಿ.ಅಣ್ಣಯ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸೋಮಶೇಖರ ಕಿಚಡಿ, ಸಂಯೋಜ ನಾಧಿಕಾರಿ ಡಾ.ಅಶೋಕಕುಮಾರ್ ವಿ.ಪಾಳೇದ್, ಗ್ರಾ.ಪಂ ಮಾಜಿ ಸದಸ್ಯ ಬಿ.ಎಂ.ಶಿವಕುಮಾರ್, ಸಹಾಯಕ ಪ್ರಾಧ್ಯಾಪಕ ಹೆಚ್.ಶಾಂತನಾಯ್ಕ್, ಕಾಡಜ್ಜಿ ಶಿವಪ್ಪ ಭಾಗವಹಿಸಲಿದ್ದಾರೆ.