ಜಿಲ್ಲಾ ಕಸಾಪದಿಂದ ಇಂದು ನಗರದಲ್ಲಿ ವಿಶ್ವ ಮಾನವ ದಿನಾಚರಣೆ

ಜಿಲ್ಲಾ ಕಸಾಪದಿಂದ ಇಂದು ನಗರದಲ್ಲಿ ವಿಶ್ವ ಮಾನವ ದಿನಾಚರಣೆ

ಜಿಲ್ಲಾ ಕಸಾಪದಿಂದ ಇಂದು ನಗರದಲ್ಲಿ ವಿಶ್ವ ಮಾನವ ದಿನಾಚರಣೆ - Janathavaniಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ `ಹೆಸರಾಯಿತು ಕರ್ನಾಟಕ – ಉಸಿರಾಗಲಿ ಕನ್ನಡ’ ಕರ್ನಾಟಕ ಎಂದು ಹೆಸರಾಗಿ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ `ಕರ್ನಾಟಕ ಸಂಭ್ರಮ-50′ ಹಾಗೂ `ವಿಶ್ವ ಮಾನವ ದಿನಾಚರಣೆ’ ಪ್ರಯುಕ್ತ `ವಿಶೇಷ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಲರವ’ ಮಾಲಿಕೆ-2 ಡಿಸೆಂಬರ್ 2023 ಹಾಗೂ `ಅವಾಂತರ’ – ಹಾಸ್ಯ ಪ್ರಸಂಗಗಳು ಕೃತಿ ಲೋಕಾರ್ಪಣೆ ಸಮಾರಂಭವು ಇಂದು ಸಂಜೆ 5-30 ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ.
ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ವಹಿಸುವರು. ಉದ್ಘಾಟನೆ : ಎನ್. ಪರಶುರಾಮನ ಗೌಡ. ಉಪನ್ಯಾಸ : ಡಾ. ಮಂಜಣ್ಣ. ವಿಷಯ : ಕುವೆಂಪುರವರ ಬದುಕು-ಬರಹ’.
ಮುಖ್ಯ ಅತಿಥಿಗಳು : ಡಾ. ಬಿ. ಹಾಲೇಶ್. ಉಪಸ್ಥಿತಿ : ಸಿದ್ದೇಶ್ ಬಿ.ಎಸ್., ಲೇಖಕರು : `ಅವಾಂತರ’- ಹಾಸ್ಯ ಪ್ರಸಂಗಗಳನ್ನು ಒಳಗೊಂಡಿದೆ. ನಾಡಗೀತೆ ಮತ್ತು ಕುವೆಂಪು ವಿರಚಿತ ಗೀತಗಾಯನ ಕು. ಪೃಥ್ವಿ ಮತ್ತು ತಂಡ, ಆದಮ್ಯ ಕಲಾ ಸಂಸ್ಥೆ, ದಾವಣಗೆರೆ ಇವರಿಂದ ಸಾಂಸ್ಕೃತಿಕ ಕಲರವ : ದವನ್‌-ನೂತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆಯಲಿದೆ.
ಅವಾಂತರ ಕೃತಿ ಹಾಗೂ ಕೃತಿಕಾರರ ಪರಿಚಯ : ಅವಾಂತರ 50 ಹಾಸ್ಯ ಪ್ರಸಂಗಗಳ ನ್ನೊಳಗೊಂಡ ಒಂದು ಪುಸ್ತಕ. ಈ ಕೃತಿ ಲೇಖಕರಾದ ಬಿ.ಎಸ್ ಸಿದ್ದೇಶ್‌ರವರು, ವಿಶ್ರಾಂತ ಆಂಗ್ಲ ಭಾಷಾ ಅಧ್ಯಾಪಕರಾಗಿದ್ದು ಬಸವನಕೋಟೆ ಗ್ರಾಮದವರು.
ಈ ಕೃತಿಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿನ ದಿನ ನಿತ್ಯದ ತಮ್ಮ ಕೆಲಸಗಳ ನಡುವೆ ಬರುವ ಕೆಲವು ತಮಾಷೆ ಅಂಶ ಗಳನ್ನು ಜಾಣತನ ದಲ್ಲಿ, ಚಾಣಾಕ್ಷ ರೀತಿಯಲ್ಲಿ ಭೇದಿ ಸುತ್ತ, ಬದುಕಿನಲ್ಲಿ ಬರುವ ಕಷ್ಟ ದುಃಖಗಳನ್ನು ಮರೆಯಲು `ವಿಶ್ವ’ ಎಂಬ ಹೆಸರಿನ ಕಾಲ್ಪನಿಕ ಒಬ್ಬರನ್ನು ಸೃಷ್ಟಿಸಿ ತುಂಬಾ ನೂತನವಾದ ನಿಜ ಬದುಕಿನ ಚಿತ್ರಣ ಗಳನ್ನು ಹಾಸ್ಯಮಯ ಜಾಣತನ ಹಾಗೂ ತುಂಟತನದಿಂದ ತನ್ನ ಚಾಣಾಕ್ಷ ಬುದ್ಧಿವಂತಿಕೆ ಪ್ರದರ್ಶನ ನಿಜಕ್ಕೂ ಓದುಗರಲ್ಲಿ ಸಂತೋಷ ತರುತ್ತದೆ ಹಾಗೂ ಸಮಾಜ ಅಂಗೀಕರಿಸುತ್ತದೆ ಎಂದು ಈ ಕೃತಿಯಲ್ಲಿ ತಿಳಿಸುತ್ತದೆ.

error: Content is protected !!