ಮಲೇಬೆನ್ನೂರು, ಡಿ.28- ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಗಳೂರಿನ ಇನ್ವೆಂಜರ್ ಫೌಂಡೇಷನ್ ಮತ್ತು ಕಾಟಪಾಡಿಯ ಸೃಷ್ಠಿ ಫೌಂಡೇಶನ್ ಮತ್ತು ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಇವರುಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಕೊಡಮಾಡುತ್ತಿರುವ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲಪ್ರಶಸ್ತಿಗೆ ಜಿ. ಬೇವಿನಹಳ್ಳಿಯ ಅಂಗನವಾಡಿ `ಸಿ’ ಕೇಂದ್ರದ ಪುಟಾಣಿ ಎನ್. ಅನ್ವಿತಾ ಆಯ್ಕೆಯಾಗಿದ್ದಾಳೆ.
ಇದೇ ದಿನಾಂಕ 31 ರ ಭಾನುವಾರ ಸಂಜೆ 4 ಗಂಟೆಗೆ ಕಾಟಪಾಡಿಯ ಎಸ್.ವಿ.ಎಸ್ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
February 7, 2025