ಜಿ.ಎಂ.ಎಸ್ ಅಕಾಡೆಮಿಗೆ ರ‍್ಯಾಂಕ್

ಜಿ.ಎಂ.ಎಸ್ ಅಕಾಡೆಮಿಗೆ ರ‍್ಯಾಂಕ್

ದಾವಣಗೆರೆ, ಡಿ. 27 – ದಾವಣಗೆರೆ ವಿಶ್ವವಿದ್ಯಾನಿಲಯವು ಕಳೆದ ಆಗಸ್ಟ್/ ಸೆಪ್ಟೆಂಬರ್ – 2023 ರಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ನಗರದ ಜಿ.ಎಂ.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್ಸಿ ವಿಭಾಗದಿಂದ ಪಿ. ಹರ್ಷಿತ ಮೂರನೇ ರ‍್ಯಾಂಕ್, ಅಂಜುಮ್ ಭಾನು ಆರನೇ ರಾಂಕ್, ಬಿ.ಕಾಂ ವಿಭಾಗದಿಂದ ಡಿ.ಎಂ. ಹರ್ಷಿತ ಏಳನೇ ರಾಂಕ್ ಮತ್ತು ಬಿ.ಸಿ.ಎ. ವಿಭಾಗದಿಂದ ಪಿ. ಅಶ್ವಿನಿ ಹತ್ತನೇ ರ‍್ಯಾಂಕ್ ಗಳಿಸಿದ್ದಾರೆ.

error: Content is protected !!