ದಾವಣಗೆರೆ, ಡಿ. 27- ಕರುನಾಡ ಸಮರ ಸೇನೆ ವತಿಯಿಂದ ನಾಳೆ ದಿನಾಂಕ 28 ರ ಗುರುವಾರ ಬೆಳಿಗ್ಗೆ 11.30 ಕ್ಕೆ ನಗರದ ರೋಟರಿ ಬಾಲಭವನದ ಆವರಣದಲ್ಲಿರುವ ಕೇಶವಮೂರ್ತಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ಅಧ್ಯಕ್ಷ ಐಗೂರು ಬಿ.ಕೆ. ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಉದ್ಯಮಿ ಶ್ರೀನಿವಾಸ ಶಿವಗಂಗಾ ಅವರು ರೈತರಿಗೆ ವಿಮಾ ಬಾಂಡ್ ವಿತರಿಸಲಿದ್ದಾರೆ.
ಸೇನೆ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಐಗೂರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿನಾಯಕ ಪೈಲ್ವಾನ್, ಡಾ.ಎಂ.ವಿ. ವೆಂಕಟೇಶ್, ಉಮಾ ಪ್ರಶಾಂತ್, ಬಿ.ಜಿ. ಅಜಯ್ ಕುಮಾರ್, ಎಸ್.ಟಿ. ವೀರೇಶ್, ನಿರ್ಮಲ ಮೈಕೆಲ್, ಸಾಧಿಕ್ ಪೈಲ್ವಾನ್, ಭವ್ಯ ಮೇಘರಾಜ್, ಷಣ್ಮುಖಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಣಬೇರು ಶಿವಕುಮಾರ್, ಜಿ.ಹೆಚ್. ಮಾಲತೇಶ್, ಕರಿಬಸಪ್ಪ ಪೈಲ್ವಾನ್, ವಸಂತಕುಮಾರ್, ಎಸ್. ಆನಂದ್, ಶ್ರೀಧರ್ ಮಲ್ಲಾಪುರ ಇದ್ದರು.
February 28, 2025