ಚಿತ್ರಕಲಾ ಪರಿಷತ್ತಿಗೆ ಶ್ರೀನಿವಾಸ್ ಅಧ್ಯಕ್ಷ

ಚಿತ್ರಕಲಾ ಪರಿಷತ್ತಿಗೆ ಶ್ರೀನಿವಾಸ್ ಅಧ್ಯಕ್ಷ

ದಾವಣಗೆರೆ, ಡಿ. 25- ಚಿತ್ರಕಲಾ ವಲಯದಲ್ಲಿ ಚಿತ್ರಸಂತೆ ಸಹಿತ ವಿನೂತನ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿರುವ ನಗರದ ಚಿತ್ರಕಲಾ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಡಿ.ಸಿ. ಶ್ರೀನಿವಾಸ ಚಿನ್ನಿಕಟ್ಟಿ ಅವರು ಆಯ್ಕೆಯಾಗಿದ್ದಾರೆ.  

ನಿನ್ನೆ ನಡೆದ ಪರಿಷತ್ತಿನ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕಾರ್ಯದರ್ಶಿಯಾಗಿ ಡಿ. ಶೇಷಾಚಲ ಪುನರಾಯ್ಕೆಯಾಗಿದ್ದಾರೆ. ಸಂಸ್ಥಾಪಕ ಅಧ್ಯಕ್ಷ ಸದಾನಂದ ಹೆಗಡೆ, ರವಿ ಶಾಮ್ ಹುದ್ದಾರ, ವಿಜಯ್ ಜಾಧವ್ ಸಹಿತ ಕಾರ್ಯಕಾರಿ ಮಂಡಳಿಯ ಇತರೆ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!