ದಾವಣಗೆರೆಯ ಶ್ರೀ ಅಕ್ಕಮಹಾದೇವಿ ಸಮಾಜದ ವತಿಯಿಂದ ಶ್ರೀ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಇಂದು ಸಂಜೆ 5 ಗಂಟೆಗೆ ಹುಣ್ಣಿಮೆ ಕಾರ್ಯಕ್ರಮದಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಹೊಸ್ತಿಲ ಹುಣ್ಣಿಮೆ ಮತ್ತು ಕ್ರಿಸ್‌ಮಸ್ ಕುರಿತು ಜಯದೇವಮ್ಮ ಪಂಡಿತ್ ಮತ್ತು ಶೋಭಾ ಕಣವಿ ಉಪನ್ಯಾಸ ನೀಡುವರು. ಶ್ರೀ ಅಕ್ಕಮಹಾದೇವಿ ಸಮಾಜದ ಅಧ್ಯಕ್ಷರಾದ ಶ್ರೀಮತಿ ಕೆ.ಕೆ. ಸುಶೀಲಮ್ಮ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಶ್ರೀಮತಿ ನೀಲಗುಂದ ಜಯಮ್ಮ ಚಿಂತನ – ಮಂತನ ಕಾರ್ಯಕ್ರಮವನ್ನು ನಡೆಸಿಕೊಡುವರು.