ಹರಿಹರದಲ್ಲಿಂದು ಸುವರ್ಣ ಸಂಭ್ರಮ

 ಪರಸ್ಪರ ಬಳಗ, ಕನ್ನಡ ಸಾಹಿತ್ಯ ಪರಿಷತ್‌, ತಾಲ್ಲೂಕು ಬಂಡಾಯ ಸಾಹಿತ್ಯ ಸಂಘಟನೆ, ಚಿಂತನ ಬಳಗ, ನಕ್ಷತ್ರ ಟಿ.ವಿ. ಸಾಹಿತ್ಯ ಸಂಗಮ ಮತ್ತು ಕರ್ನಾಟಕ ಜಾನಪದ ಪರಿಷತ್‌ ಹರಿಹರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಆಚರಣೆ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ.

ಕರ್ನಾಟಕ, ಕನ್ನಡ, ಸಂವಿಧಾನ ಕುರಿತು ಚಿಂತನೆ, ಕನ್ನಡ ನಾಡು, ನುಡಿ ಕುರಿತು ಕವಿಗೋಷ್ಠಿ ಹಾಗೂ ಅಂಬೇಡ್ಕರ್ ಮತ್ತು ಸಂವಿಧಾನ ಕುರಿತು ಗೀತಾ ಗಾಯನ ನಡೆಯಲಿದೆ. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ, ವಿಷಯ ಪ್ರವೇಶ ಹಿರಿಯ ಸಾಹಿತಿ ಪ್ರೊ. ಸಿ‌.ವಿ. ಪಾಟೀಲ್, ವಿಶೇಷ ಉಪನ್ಯಾಸ ಸಂಶೋಧಕ ಡಾ. ವಡ್ಡಿಗೆರೆ ನಾಗರಾಜಯ್ಯ, ಡಾ. ಹೊನ್ನಪ್ಪ, ಗೌರವ ಉಪಸ್ಥಿತಿ ಇನ್‌ಸೈಟ್‌ ಸಂಸ್ಥಾಪಕ ಜಿ.ಬಿ. ವಿನಯಕುಮಾರ್, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎನ್‌. ರುದ್ರಮುನಿ, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಹಿರಿಯ ಕ್ರೀಡಾಪಟು ಹೆಚ್. ನಿಜಗುಣ, ಪತ್ರಕರ್ತ ಟಿ. ಇನಾಯತ್ ಉಲ್ಲಾ, ಹೆಚ್. ಮಲ್ಲಿಕಾರ್ಜುನ್  ಹರಪನಹಳ್ಳಿ, ಕನ್ನಡ ನಾಡು-ನುಡಿ ಕವಿತೆಗಳು ಹಾಗೂ ಡಾ. ಅಂಬೇಡ್ಕರ್ ಸಂವಿಧಾನ  ಕುರಿತು ಗೀತಾ ಗಾಯನ ನಡೆಸಿಕೊಡುವವರು ಹೆಗ್ಗೆರೆ ರಂಗಪ್ಪ, ಪರಮೇಶ್ವರಪ್ಪ ಕತ್ತಿಗೆ, ಅಂಜಿನಪ್ಪ ಲೋಕಿಕೇರಿ, ವೀರೇಶ್ ಕುಮಾರ್.

ಕವಿಗೋಷ್ಠಿ ಅಧ್ಯಕ್ಷತೆ ಬಂಡಾಯ ಕವಿ ಜೆ. ಕಲಿಂ ಬಾಷಾ, ಆಶಯ ನುಡಿ ಜಿಲ್ಲಾ ಮಾಜಿ ಕಸಾಪ ಅಧ್ಯಕ್ಷ ಎಸ್.ಹೆಚ್. ಹೂಗಾರ್ ಹದಿನಾಲ್ಕು ಕವಿಗಳು ಕವನವನ್ನು ವಾಚಿಸಲಿದ್ದಾರೆ.

error: Content is protected !!