ದಾವಣಗೆರೆ ತಾಲ್ಲೂಕಿನ ಹಳೇಬಾತಿ ಗ್ರಾಮದಲ್ಲಿ ಹಜರತ್ ಸೈಯದ್ ಚಮನ್ ಷಾವರದಿ ಚಿಸ್ತಿ ಅವರ ಉರುಸು-ಷರೀಫ್ ಕಾರ್ಯಕ್ರಮಗಳು ಇಂದಿನಿಂದ ನಡೆಯಲಿವೆ.
ಇಂದು ರಾತ್ರಿ 930ಕ್ಕೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ದರ್ಗಾಕ್ಕೆ ಜಂಡೆ ಏರಿಸುವುದು.
ನಾಡಿದ್ದು ದಿನಾಂಕ 27ರ ಬುಧವಾರ ರಾತ್ರಿ 7 ಗಂಟೆಗೆ ಸ್ವಾಮಿಗಳವರ ಗಂಧ (ಸಂದಲ್) ಪಲ್ಲಕ್ಕಿಯಲ್ಲಿ ಬಾಜಾ ಭಜಂತ್ರಿಗಳೊಂದಿಗೆ ಹಳೇಬಾತಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹಿಂದೂ-ಮುಸ್ಲಿಂ ಬಾಂಧವರೊಂದಿಗೆ ಮೆರವಣಿಗೆ ಹೊರಟು, ದರ್ಗಾ ಸೇರಲಿದೆ. ನಂತರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಗಂಧ ನೆರವೇರಲಿದೆ.
ದಿನಾಕಂ 28ರ ಗುರುವಾರ ರಾತ್ರಿ ಸ್ವಾಮಿಗಳವರ ಉರುಸು ದರಗಾದಲ್ಲಿ ಫಾತೇಹಾ, 29ರಂದು ಭಕ್ತರಿಂದ ಸಕ್ಕರೆ ಓದಿಕೆ ಹಾಗೂ ದಿ.30ರಂದು ಸ್ವಾಮಿ ಪ್ರಸಾದ ವಿನಿಯೋಗ ಇರುತ್ತದೆ.