ಶಿರಮಗೊಂಡನಹಳ್ಳಿಯ ಅನ್ಮೋಲ್ ವಿದ್ಯಾಸಂಸ್ಥೆಯಲ್ಲಿ ಇಂದು ಸಂಜೆ 5ಕ್ಕೆ ಶಾಲಾ ಆವರಣದಲ್ಲಿ ಅನ್ಮೋಲ್ ಉತ್ಸವ 2023 ರ ಕಾರ್ಯಕ್ರಮವನ್ನು ಜೈ ಜವಾನ್ – ಜೈ ಕಿಸಾನ್ ಎಂಬ ಶೀರ್ಷಿಕೆಯಡಿ ಆಚರಿಸಲಾಗುತ್ತಿದೆ.
ಭಾರತೀಯ ಸೈನಿಕರು ಮತ್ತು ಅನ್ನದಾತ ರೈತರ ತ್ಯಾಗ ಶ್ರಮವನ್ನು ಪದಗಳಲ್ಲಿ ವರ್ಣಿಸಲಾಗದು. ಅವರು ನಿತ್ಯ ಪ್ರಾತಃ ಸ್ಮರಣೀಯರು. ಅವರಿಗೊಂದು ನಮನ ಸಲ್ಲಿಸಲು ಈ ಕಾರ್ಯಕ್ರಮ ಅರ್ಪಣೆ. ಸಮಾರಂಭದಲ್ಲಿ 2022-23 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವರ್ಷದ ವಿದ್ಯಾರ್ಥಿ ಪ್ರಶಸ್ತಿ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಅನ್ಮೋಲ್ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಜಿ. ದಿನೇಶ್ ಸಮಾರಂಭದ ಅಧ್ಯಕ್ಷತೆ ವಹಿಸುವರು.