ಹೊನ್ನಾಳಿ, ಡಿ.24- ಮಾದರ ಚೆನ್ನಯ್ಯ ನವರ 973 ನೇ ಜಯಂತೋತ್ಸವವು ನಾಡಿದ್ದು ದಿನಾಂಕ 26ರ ಮಂಗಳವಾರ ಬೆಳಿಗ್ಗೆ 10 ಕ್ಕೆ ಶಿರಾಳಕೊಪ್ಪದ ನೇರಲಗಿಯಲ್ಲಿ ನಡೆಯಲಿದೆ ಎಂದು ಮಾದರ ಚೆನ್ನಯ ಬಳ್ಳಿಗಾವಿ ಸೇವಾ ಸಮಿತಿ ರಾಜ್ಯ ಉಪಾಧ್ಯಕ್ಷ ಮಲ್ಲಿಗೇನಹಳ್ಳಿ, ಕೆ. ರಾಜಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಅಂಬೇಡ್ಕರ್‌ರವರ 67 ನೇ ಪರಿನಿರ್ವಾಣ ದಿನ ಆಚರಿಸಲಾಗುವುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಅಬಕಾರಿ ಸಚಿವ ತಿಮ್ಮಾಪುರ್, ಹೆಚ್. ಆಂಜನೇಯ, ಬಿ.ಎನ್. ಚಂದ್ರಪ್ಪ, ಬಿ.ವೈ. ರಾಘವೇಂದ್ರ, ವಿಜಯೇಂದ್ರ, ಶಾಸಕ ಶಾಂತನ ಗೌಡ, ಯು.ಬಿ. ಬಣಕಾರ್, ಬಸವಂತಪ್ಪ, ನಾಗರಾಜ ಗೌಡ್ರ, ಸಮಿತಿ ಗೌರವಾಧ್ಯಕ್ಷ ಚಂದ್ರಪ್ಪ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದಿಡಗೂರು ರುದ್ರೇಶ್, ತಮ್ಮಣ್ಣ, ಆರ್. ನಾಗಪ್ಪ, ಕೊಡತಾಳ್ ರುದ್ರೇಶ್, ಬಿ.ಸಿ. ಮಂಜುನಾಥ್, ಕತ್ತಿಗೆ ಚನ್ನೇಶ್, ಮಾದೇನಹಳ್ಳಿ ಶೇಖರಪ್ಪ, ಯಕ್ಕನಹಳ್ಳಿ ಶಿವರಾಜ್ ಇನ್ನಿತರರಿದ್ದರು.