ಮಲೇಬೆನ್ನೂರು, ಡಿ.24- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ 2024ರ ಫೆಬ್ರವರಿ 8 ಮತ್ತು 9 ರಂದು ಹಮ್ಮಿಕೊಂಡಿರುವ 6ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನಾಳೆ ದಿನಾಂಕ 25 ರಿಂದ ಜನವರಿ 8 ರವರೆಗೆ 2ನೇ ಹಂತದ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.
ನಾಳೆ ದಿನಾಂಕ 25ರ ಸೋಮವಾರ ಬೆಳಿಗ್ಗೆ 10ಕ್ಕೆ ಹೊನ್ನಾಳಿ, ಮಧ್ಯಾಹ್ನ 1 ಗಂಟೆಗೆ ನ್ಯಾಮತಿ ಮತ್ತು ಸಂಜೆ 4 ಗಂಟೆಗೆ ಶಿಕಾರಿಪುರದಲ್ಲಿ ಹಾಗೂ ದಿನಾಂಕ 26ಕ್ಕೆ ಸೊರಬ, ಸಾಗರ, ಹೊಸನಗರ, ದಿನಾಂಕ 27ಕ್ಕೆ ಶಿವಮೊಗ್ಗ, ಭದ್ರಾವತಿ, ಚನ್ನಗಿರಿ, ದಿನಾಂಕ 28ಕ್ಕೆ ಅಜ್ಜಂಪುರ, ತರೀಕೆರೆ, ಕಡೂರು, ದಿನಾಂಕ 29ಕ್ಕೆ ಚಿಕ್ಕಮಗಳೂರಿನಲ್ಲಿ ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ದಿನಾಂಕ 30ಕ್ಕೆ ಹಾಸನದಲ್ಲಿ ಜಿಲ್ಲಾ ವ್ಯಾಪ್ತಿಯ ಪೂರ್ವಭಾವಿ ಸಭೆಗಳನ್ನು ಶ್ರೀಗಳು ನಡೆಸಲಿದ್ದಾರೆ.
ದಿನಾಂಕ 31ಕ್ಕೆ ಕೊಡಗುರ, ಜನವರಿ 1 ರಿಂದ 8 ರವರೆಗೆ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.