ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ನಿರ್ಣಯ ಕೈಗೊಳ್ಳಲಿ

ಬಸವ ಬಳಗದ ಸದಸ್ಯ ಮಹಾಂತೇಶ ಅಗಡಿ ಒತ್ತಾಯ

ದಾವಣಗೆರೆ, ಡಿ.22- ನಾಳೆ ದಿನಾಂಕ 23 ಹಾಗೂ 24ರಂದು ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧಿವೇಶನದಲ್ಲಿ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ನಿರ್ಣಯ ತೆಗೆದುಕೊಳ್ಳುವಂತೆ ಬಸವ ಬಳಗವು ಮನವಿ ಮಾಡುವುದಾಗಿ ಬಸವ ಬಳಗದ ಸದಸ್ಯ ಮಹಾಂತೇಶ ಅಗಡಿ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಈಗಾಗಲೇ ಬಸವಬಳಗ ಹಾಗೂ ಕನ್ನಡ ಪರ ಸಂಘಟನೆಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಅಭಿಪ್ರಾಯಕ್ಕಾಗಿ ಕಳುಹಿಸಲಾಗಿದೆ ಎಂದರು.

ಲಿಂಗಾಯತ ಧರ್ಮಕ್ಕೆ ಸಾಂವಿಧಾನಕ ಮಾನ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು.  ಲಿಂಗಾಯತ ಹಾಗೂ  ಬಸವತತ್ವ ಒಪ್ಪುವ ವೀರಶೈವರನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಪರಿಗಣಿಸಿದ್ದು, ಅದನ್ನು ರಾಜ್ಯ ಸರ್ಕಾರ ಜಾರಿಗೆ ತರಲು ನಿರ್ಣಯ ಕೈಗೊಳ್ಳಬೇಕು ಎಂದು ಹೇಳಿದರು.

ವೀರಶೈವ ಎಂಬುದು ಶೈವ ಪರಂಪರೆಯ ಭಾಗವೆಂಬುದನ್ನು ಕೇಂದ್ರ ಪರಿಗಣಿಸಿಲ್ಲ ಎಂದು ತಿಳಿದಿದೆ ಹೀಗಾಗಿ ನಾಗಮೋಹನ್ ದಾಸ್ ವರದಿ ಪರಿಗಣಿಸಿ ಸಾಂವಿಧಾನಿಕ ಮಾನ್ಯತೆ ನೀಡಬೇಕೆಂದು ಒಮ್ಮತದ ನಿರ್ಧಾರ ಕೈಗೊಳ್ಳಬೇಕು ಎಂದು ಮಹಾಸಭೆಯನ್ನು ಒತ್ತಾಯಿಸಿದರು. ಬಸವ ಬಳಗದ ಅಧ್ಯಕ್ಷ ಹುಚ್ಚಪ್ಪ ಮಾಸ್ತರ್ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!