ದಾವಣಗೆರೆ, ಡಿ. 19 – ನಗರದಲ್ಲಿ ಇದೇ ದಿನಾಂಕ 23 ಹಾಗೂ 24ರಂದು ನಡೆಯಲಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಅಧಿವೇಶನದ ಹಿನ್ನೆಲೆಯಲ್ಲಿ ನಾಡಿದ್ದು ದಿನಾಂಕ 21ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಯುವ ಘಟಕದ ವತಿಯಿಂದ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಯುವ ಘಟಕದ ರಾಷ್ಟ್ರೀಯ ಉಪಾಧ್ಯಕ್ಷ ಸಂದೀಪ್ ಅಣಬೇರು, ಮಹಾಸಭಾ ಅಧಿವೇಶನದ ಜಾಗೃತಿ ಮೂಡಿಸಲು ಈ ರಾಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ರಾಲಿಯು ಶಾಮನೂರಿನ ಆಂಜನೇಯ ಸ್ವಾಮಿ ದೇವಾಲಯದಿಂದ ಆರಂಭವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳಾದ ಶಂಭು ಎಸ್. ಉರೇಕೊಂಡಿ, ಶಿವರತನ್, ನಿಧಿರಾಜ್ ಐನಳ್ಳಿ, ಅಜಿತ್ ಆಲೂರು, ಹರೀಶ್ ಶಾಮನೂರು, ಕಾರ್ತಿಕ್ ಹಿರೇಮಠ್, ಗುರುಶಾಂತೇಶ್ ಸೋಗಿ, ಶಿವರಾಜ್, ಹೇಮಂತ್, ಸಂಜಯ್, ಶಿವಕುಮಾರ್, ಅರುಣ್ ಕುಂದೂರು ಮತ್ತಿತರರು ಉಪಸ್ಥಿತರಿದ್ದರು.