ಪರಿಸರ ಪ್ರೇಮಿ ಹಾಲೇಶ್

ಪರಿಸರ ಪ್ರೇಮಿ ಹಾಲೇಶ್

`ವಾಚ್ ರಿಪೇರಿ, ಕ್ಯಾಲ್ಕೂಲೇಟರ್ ರಿಪೇರಿ ಎನ್ನುವುದರ ಜೊತೆಗೆ  ಪಶು-ಪಕ್ಷಿಗಳನ್ನು ಸಂರಕ್ಷಿಸಿ, ನೀರನ್ನು ನಿಯಮಿತವಾಗಿ ಬಳಸಿ, ಮನೆಗೊಂದು ಮರ, ಊರಿಗೊಂದು ವನ, ಸಂಚಾರಿ ನಿಯಮಗಳನ್ನು ಪಾಲಿಸಿ,  ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಗಿಡ-ಮರಗಳ ಬೆಳೆಸಿ, ಪರಿಸರ ಉಳಿಸಿ, ನಾಡು ಬೆಳೆಸಿ,  ಪಶು-ಪಕ್ಷಿಗಳಿಗೆ ನೀರುಣಿಸಿ, ನಗರವನ್ನು ಸ್ವಚ್ಛವಾಗಿಡಿ’.

ಈ ರೀತಿಯ ಉತ್ತಮ ಪರಿಸರ ಪ್ರೇಮದ ವಾಕ್ಯಗಳನ್ನು ಮೈಕ್‌ನಲ್ಲಿ ಹಾಕಿಕೊಂಡು ಎಲ್ಲಾ ಬಡಾವಣೆಗಳಲ್ಲಿ ಓಡಾಡುವ ಇವರನ್ನು ನೀವೂ ನೋಡಿರಬಹುದು! ಪರಿಸರ ಪ್ರೇಮದ ಜೊತೆಗೆ ಜೀವನೋಪಾಯ ಮಾರ್ಗವನ್ನು ಕಂಡುಕೊಂಡಿರುವ ಅಪರೂಪದ ಸಹೃದಯ ವ್ಯಕ್ತಿ ಹಾಲೇಶ್. ಈತನೊಬ್ಬ ಶ್ರೀಸಾಮಾನ್ಯ. ತನ್ನ 65ರ ವಯಸ್ಸಿನಲ್ಲಿ ಜೀವನೋತ್ಸಾಹ ಕಳೆದುಕೊಳ್ಳದೆ ಪ್ರತಿನಿತ್ಯ 20-25 ಕಿಮೀ ನಡೆದು ವಾಚ್ ರಿಪೇರಿ ಮಾಡಿಕೊಟ್ಟು ಜೀವನ ನಿರ್ವಹಣೆ ಮಾಡುತ್ತಾರೆ. ತನ್ನ ಜೀವನದ ಬಂಡಿ ಮತ್ತು ಪರಿಸರ ಪ್ರೇಮವನ್ನು ಎಲ್ಲೆಡೆ ಹರಡುತ್ತಿದ್ದಾರೆ. 

ಇವರ ದಿನದ ದುಡಿಮೆ ಕೇವಲ ರೂ. 200 ಮಾತ್ರ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು,   ಕೆಲಸ ಮಾಡುವ ಅನಿವಾರ್ಯತೆ ಇಲ್ಲದಿದ್ದರೂ ತಮ್ಮ ಇಳಿ ವಯಸ್ಸಿನಲ್ಲಿ ಸ್ವಂತ ದುಡಿದು ತಿನ್ನುವ ಸ್ವಾಭಿಮಾನಿ ವ್ಯಕ್ತಿ.    

ಈತನ ಪರಿಸರ ಪ್ರೇಮದ ವಾಕ್ಯಗಳಲ್ಲಿ ಸಾಕಷ್ಟು ಸತ್ಯದ ವಿಚಾರಗಳಿವೆ. ಇವು ನಮ್ಮೆಲ್ಲರಿಗೆ ಅರಿವು ಆಧಾರಿತ ಸಾಮೂಹಿಕ ಕಾರ್ಯವಾಗಲಿ. ಇತ್ತೀಚೆಗೆ ವಿಶ್ವದಾದ್ಯಂತ ಹಸಿರು ಉದ್ಯೋಗ ಗಳು, ಹಸಿರು ಕೈಗಾರಿಕೆ, ಹಸಿರು ದಳಗಳು ಅಸ್ತಿತ್ವಕ್ಕೆ ಬಂದು ಪರಿಸರ ಪ್ರೇಮಿ ಸಹೃದಯರ ಮಾನ್ಯತೆ ಪಡೆಯುತ್ತಿವೆ. ಇವುಗಳು ಲಾಭಕ್ಕಿಂತಲೂ ಜೀವ ಕಲ್ಯಾಣದ ದೃಷ್ಟಿಯನ್ನು ಅನುಸರಿಸುತ್ತವೆ. ಪರಿಸರಕ್ಕೆ ಹಾನಿ ಮಾಡದಿರುವ, ಜನರನ್ನು ಶೋಷಿಸದ ಉದ್ಯೋಗಗಳ ಕಡೆ ಹೆಚ್ಚು ಹೆಚ್ಚು ಗಮನ ಕೊಡುತ್ತಿವೆ. ಈ ರೀತಿಯ ಉದ್ಯೋಗಗಳು ಜನರಿಗೆ, ಜೀವಜಾಲಕ್ಕೆ ಸಹಾಯಕಾರಿ. ಸಮಾಜ ಹೆಚ್ಚು ಹೆಚ್ಚು ಜೀವ ಕಲ್ಯಾಣಕ್ಕೆ ಪ್ರಯೋಜನವಾಗುವ ಉದ್ಯೋಗಗಳನ್ನು ಸೃಷ್ಟಿಸುವತ್ತ ಗಮನ ಹರಿಸಲಿ.


– ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ.

error: Content is protected !!