ದಾವಣಗೆರೆ, ಡಿ. 19- ಎರಡೂ ಕಿಡ್ನಿಗಳು ವಿಫಲವಾಗಿರುವ ನನ್ನ ಪತಿಯ ಚಿಕಿತ್ಸೆಗೆ ಹಣದ ಅವಶ್ಯಕತೆ ಇದ್ದು, ದಾನಿಗಳು ಆರ್ಥಿಕವಾಗಿ ಸಹಾಯ ಮಾಡುವಂತೆ ಬಿ.ಎಸ್. ವೀಣಾ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಕೆ.ಬಿ.ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ನನ್ನ ಪತಿ ಅಪೂರ್ವ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನೂ ಕೂಡ ಟೈಲರಿಂಗ್ ಕೆಲಸ ಮಾಡುತ್ತಾ, ಅದರಲ್ಲಿಯೇ ಮನೆ ಬಾಡಿಗೆ ಪಾವತಿಸಿ ಕಷ್ಟದ ಜೀವನ ನಡೆಸುತ್ತಿದ್ದೇವೆ ಎಂದರು.
ಕಳೆದ ಮೂರು ತಿಂಗಳಿನಿಂದ ಪತಿ ಸತೀಶ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಸುವಂತೆ ತಿಳಿಸಿದ್ದಾರೆೆ. ಪ್ರತಿ ಡಯಾಲಿಸಿಸ್, ಇಂಜೆಕ್ಷನ್ ಹಾಗೂ ಔಷಧಿಗಳಿಗೆ ಸೇರಿ ಒಟ್ಟು ತಿಂಗಳಿಗೆ 54 ಸಾವಿರ ರೂ. ಖರ್ಚಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು.
ತನ್ನ ಪತಿಯ ಚಿಕಿತ್ಸೆಗೆ ದಾನಿಗಳು ನೆರವಾಗುವಂತೆ ಮತ್ತು ವೈದ್ಯಕೀಯ ವೆಚ್ಚ ಭರಿಸಲು ಮನವಿ ಮಾಡಿದರು. ಪತ್ರಿಕಾಗೋಷ್ಠಿ ಯಲ್ಲಿ ಪತಿ ಬಿ.ಎಸ್. ಸತೀಶ್ ಇದ್ದರು.