ನಗರದಲ್ಲಿ ಇಂದು ಸಂಗೀತ ಸಂಜೆ

ನಗರದಲ್ಲಿ ಇಂದು ಸಂಗೀತ ಸಂಜೆ

ಶಂಕರ್‌ನಾಗ್‌ ಸ್ಮಾರಕಕ್ಕೆ ಪ್ರಯತ್ನ

ಕನ್ನಡ ನಾಡು ಕಂಡ ಅದ್ಭುತ ನಟ, ನಿರ್ದೇಶಕ ಶಂಕರ್‌ ನಾಗ್‌ ಅವರು ದಾವಣಗೆರೆ ಸಮೀಪದ ಆನಗೋಡಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಅವರ ಸ್ಮರಣಾರ್ಥ ಆನಗೋಡಿ ನಲ್ಲಿ ಶಂಕರ್‌ ನಾಗ್‌ ಸ್ಮಾರಕ ನಿರ್ಮಾ ಣಕ್ಕೆ ಸಿನಿಮಾ ಸಿರಿಯಿಂದ ಪ್ರಯ ತ್ನಿಸಲಾಗುವುದು ಎಂದು ಸುರಭಿ ಶಿವಮೂರ್ತಿ ಹೇಳಿದರು.

ದಾವಣಗೆರೆ, ಡಿ.15- ಸಿನಿಮಾ ಸಿರಿ ಸಂಸ್ಥೆಯಿಂದ  ನಗರದ ಶಿವಯೋಗಾಶ್ರಮ ಮಂದಿರದ ಆವರಣದಲ್ಲಿ ನಾಳೆ ದಿನಾಂಕ 16ರ ಸಂಜೆ 6 ಗಂಟೆಗೆ ಜೊತೆ- ಜೊತೆಯಲಿ ಹೆಸರಿನಲ್ಲಿ ಸುಮಧುರ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿನಿಮಾ ಸಿರಿ ಅಧ್ಯಕ್ಷ ಸುರಭಿ ಶಿವಮೂರ್ತಿ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾ ಡಿದ ಅವರು, ಸಿನಿಮಾ ಸಿರಿ ಸಂಸ್ಥೆಯ 25ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಆಚರಣೆಯ ಪ್ರಯುಕ್ತ ನಟರಾದ ದಿ. ಶಂಕರ್‌ ನಾಗ್‌ ಹಾಗೂ ಅನಂತನಾಗ್‌ ಸಹೋ ದರರ ಚಲನ ಚಿತ್ರಗಳ ಸುಮಧುರ ಹಾಡು ಗಳನ್ನು ಪ್ರಸ್ತುತ ಪಡಿಸಲಾ ಗುವುದು ಎಂದು ಹೇಳಿದರು. 

ಕಾರ್ಯಕ್ರಮದ ಉದ್ಟಾಟನೆ ಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ನಟ ಹಾಗೂ ಮಾಜಿ ಸಚಿವ ಬಿ.ಸಿ. ಪಾಟೀಲ್‌ ಆಗಮಿಸಲಿದ್ದಾರೆ. ಸಿನಿಮಾ ಸಿರಿ ಸಂಸ್ಥೆಯಿಂದ ಇಲ್ಲಿಯವ ರೆಗೂ ಸುಮಾರು 49 ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ಇದೇ ವೇಳೆ ಸ್ಥಳೀಯ ಕಲಾವಿದರಾದ ಎಂ.ಜಿ. ಜಗದೀಶ್‌, ಆರ್‌.ಟಿ. ಮೃತ್ಯುಂಜಯ, ಹೇಮಂತ್‌ ಕುಮಾರ್‌, ಸಂಗೀತಾ ರಾಘವೇಂದ್ರ, ಶೋಭಾ, ನೇತ್ರಾ, ರುದ್ರಾಕ್ಷಿಬಾಯಿ ಅವರುಗಳು ಸುಮಾರು 25 ಚಿತ್ರಗೀತೆಗಳನ್ನು ಹಾಡಲಿದ್ದಾರೆ. ಕಾಲಾನುಕ್ರಮದಲ್ಲಿ ಕಳೆದ ವಾರ ನಿಧನರಾದ ಹಿರಿಯ ನಟಿ ದಿ. ಲೀಲಾವತಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಾಲಿಗ್ರಾಮ ಗಣೇಶ ಶೆಣೈ, ಎಂ.ಜಿ. ಜಗದೀಶ್‌, ಹೆಚ್‌.ವಿ. ಮಂಜುನಾಥಸ್ವಾಮಿ, ಕಣಕುಪ್ಪಿ ಮುರುಗೇಶ್‌, ರುದ್ರೇಶ್‌, ಡಾ. ನಾಗಪ್ರಕಾಶ್‌ ಮತ್ತಿತರಿದ್ದರು.

error: Content is protected !!