ರಾಣೇಬೆನ್ನೂರು : ನಗರಸಭೆ ವಾರ್ಡ್ 22ಕ್ಕೆ 6 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ರಾಣೇಬೆನ್ನೂರು, ಡಿ. 15 – ಸ್ಥಳೀಯ ನಗರಸಭೆ ವಾರ್ಡ್ 22ಕ್ಕೆ (ಹಿಂದುಳಿದ ಪ್ರವರ್ಗ 2ಎ ಮಹಿಳೆ ಮೀಸಲು) ಡಿ.27ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶುಕ್ರವಾರ 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 

ನಾಮಪತ್ರ ಸಲ್ಲಿಸಿದವರ ವಿವರ:  ತ್ರಿವೇಣಿ ನಾರಾಯಣಸಾ ಪವಾರ (ಭಾರತೀಯ ಜನತಾ ಪಕ್ಷ), ಸುರೇಖಾ ಅಣ್ಣಪ್ಪ ಕಂಬಳಿ, ಸುಧಾ ರಾಜು ಗೊಂದಕರ(ಕಾಂಗ್ರೆಸ್ ಪಕ್ಷ), ಸಂಗೀತಾ ಅಶೋಕ ಮಡಿವಾಳರ (ಜೆಡಿಎಸ್), ರೇಖಾ ಯುವರಾಜ ಬಾರಾಟಕ್ಕೆ,  ಕವಿತಾ ಶ್ರೀನಿವಾಸ ಹುಟ್ಟಿ (ಪಕ್ಷೇತರ) ಚುನವಾಣಾ ಅಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. 

error: Content is protected !!