ಹರಿಹರ ಕ್ಷೇತ್ರದಲ್ಲಿ ಬಸ್‌ಗಳನ್ನು ಒದಗಿಸುವಂತೆ ಹರೀಶ್ ಆಗ್ರಹ

ಹರಿಹರ ಕ್ಷೇತ್ರದಲ್ಲಿ ಬಸ್‌ಗಳನ್ನು ಒದಗಿಸುವಂತೆ ಹರೀಶ್ ಆಗ್ರಹ

ಮಲೇಬೆನ್ನೂರು, ಡಿ. 14-  ಹರಿಹರ ಕ್ಷೇತ್ರದ ಗ್ರಾಮೀಣ ಭಾಗಗಳಿಂದ ಹರಿಹರ ಮತ್ತು ದಾವಣಗೆರೆ ನಗರಗಳಿಗೆ ಕೆಎಸ್ಆರ್‌ಟಿಸಿ ಬಸ್ ಸೌಲಭ್ಯ ಒದಗಿಸುವಂತೆ ಶಾಸಕ ಬಿ.ಪಿ. ಹರೀಶ್ ಅವರು ಮಂಗಳವಾರ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದರು.

ಹರಿಹರವು ದಕ್ಷಿಣ ಕಾಶಿ ಎಂಬ ಖ್ಯಾತಿ ಹೊಂದಿದ್ದು, ಹರಿಹರೇಶ್ವರ ದೇವಸ್ಥಾನ, ಸುಕ್ಷೇತ್ರ ಉಕ್ಕಡಗಾತ್ರಿ ಸೇರಿದಂತೆ ತಾಲ್ಲೂಕಿನಲ್ಲಿರುವ ಮಠ, ಮಾನ್ಯಗಳಿಗೆ ಬರುವ ಭಕ್ತರಿಗೆ ಬಸ್ಸಿನ ತೊಂದರೆ ಇದೆ.

ಅಲ್ಲದೇ, ಮಲೇಬೆನ್ನೂರು ಸೇರಿದಂತೆ ವಿವಿಧ ಹಳ್ಳಿಗಳಿಂದ ಹರಿಹರ ಮತ್ತು ದಾವಣಗೆರೆ ನಗರಗಳಲ್ಲಿರುವ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹೊತ್ತು ಬಸ್ ಇಲ್ಲದಿರುವುದರಿಂದ ಬಹಳ ಅಡಚಣೆ ಉಂಟಾಗುತ್ತಿದ್ದು, ಹರಿಹರ ಕ್ಷೇತ್ರಕ್ಕೆ ಕೂಡಲೇ ಅಗತ್ಯ ಬಸ್ ಸೌಲಭ್ಯ ಕಲ್ಪಿಸುವಂತೆ ಹರೀಶ್ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಜನವರಿಯಲ್ಲಿ 1,800 ಹೊಸ ಬಸ್‌ಗಳು ಬರಲಿದ್ದು, ಆ ಸಂದರ್ಭದಲ್ಲಿ ಹರಿಹರಕ್ಕೆ ಬಸ್ ಒದಗಿಸುವುದಾಗಿ ಹೇಳಿದರು.

error: Content is protected !!