ನಗರದಲ್ಲಿ ನಾಳೆ ಶ್ರೀ ಅಯ್ಯಪ್ಪಸ್ವಾಮಿ ಪಡಿಪೂಜೆ

ನಗರದಲ್ಲಿ ನಾಳೆ ಶ್ರೀ ಅಯ್ಯಪ್ಪಸ್ವಾಮಿ ಪಡಿಪೂಜೆ

ದಾವಣಗೆರೆ, ಡಿ. 14 – ನಗರದ ಎಂ.ಸಿ.ಸಿ `ಬಿ’ ಬ್ಲಾಕ್ ಬಿಐಇಟಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ನಾಡಿದ್ದು ದಿನಾಂಕ 16ರ ಶನಿವಾರ ಮಂಡಲ ಪೂಜೆ, ದೀಪೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

16ರ ಬೆಳಿಗ್ಗೆ 5.30 ಕ್ಕೆ ಪಂಚ ದೇವರಿಗೆ ಪಂಚಾಮೃತ, ಶ್ರೀ ಅಯ್ಯಪ್ಪಸ್ವಾಮಿ ತುಪ್ಪದ ಅಭಿಷೇಕ, ಸಹಸ್ರ ನಾಮಾವಳಿ, ಪುಷ್ಪಾರ್ಚಾನೆ ಅಲಂಕಾರ, ಮಂತ್ರಪುಷ್ಪ, ಅಷ್ಟವರ್ಧನ ಮಹಾಗಣಪತಿ ಹೋಮ, ಮಹಾಮಂಗಳಾರತಿ ನಡೆಯಲಿದೆ. 

ನಂತರ ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5 ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ಭವ್ಯ ಮೆರವಣಿಗೆ, ದೀಪಾರಾಧನೆ, ಪಡಿಪೂಜೆ ಮಂಗಳಾರತಿ ನಡೆಯಲಿದೆ. 

error: Content is protected !!