ನಾಳೆ ವಿಜಯ ದಿವಸ ಆಚರಣೆ

ದಾವಣಗೆರೆ, ಡಿ. 14 – ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ವತಿಯಿಂದ ನಾಡಿದ್ದು ದಿನಾಂಕ 16 ರಂದು ಬೆಳಿಗ್ಗೆ 9.30 ಗಂಟೆಗೆ ಶಿವಮೊಗ್ಗದ ಸೈನಿಕ ಉದ್ಯಾನವನದಲ್ಲಿ ಹುತಾತ್ಮ ಯೋಧರಿಗೆ ಪುಷ್ಪ ನಮನ ಅರ್ಪಿಸುವ ಮೂಲಕ 1971ರ ಯುದ್ಧದ ವಿಜಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಸಮಾರಂಭದಲ್ಲಿ ಎಲ್ಲಾ ಮಾಜಿ ಸೈನಿಕರು, ವೀರ ನಾರಿಯರು, ಮಾಜಿ ಸೈನಿಕರ ಅವಲಂಬಿತರು ಹಾಗೂ ನಾಗರಿಕರು ಪಾಲ್ಗೊಳ್ಳಬೇಕು. ವಿವರಕ್ಕೆ ದೂರವಾಣಿ 08182 220925 ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕ ಡಾ.ಸಿ.ಎ ಹಿರೇಮಠ ತಿಳಿಸಿದ್ದಾರೆ.

error: Content is protected !!