ದಾವಣಗೆರೆ, ಡಿ. 14- ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ , ರೇಷ್ಮೆ ಇಲಾಖೆ ಆವರಣ, ಹಳೆ ತೋಳಹುಣಸೆ ಹಾಗೂ ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಮಟ್ಟದ ಪುರುಷ ಅಭ್ಯರ್ಥಿಗಳಿಗಾಗಿ ಇದೇ ದಿನಾಂಕ 27 ರಿಂದ ವಿದ್ಯುತ್ ಪಂಪ್ಸೆಟ್ ಮತ್ತು ಮೋಟಾರ್ ರಿವೈಂಡಿಂಗ್ ತರಬೇತಿ ಆರಂಭವಾಗಲಿದೆ.
19 ರಿಂದ 44 ವಯೋಮಿತಿಯ ಜಿಲ್ಲೆಯ ಗ್ರಾಮೀಣ ಮಟ್ಟದ ಬಿಪಿಎಲ್ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನಿರುದ್ಯೋಗಿ ಅಭ್ಯರ್ಥಿಗಳು ದಾಖಲೆಗಳೊಂದಿಗೆ ಹೆಸರನ್ನು ನೋಂದಾ ಯಿಸಬಹುದು. ಸಂಪರ್ಕಿಸಿ : ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ತೋಳಹುಣಸೆ, ದಾವಣಗೆರೆ (7019980484, 9483386143, 9964111314, 9538395817, 9481977076).