ಕಾನ್‍ಸ್ಟೇಬಲ್ ಮತ್ತು ರೈಫಲ್ ಮ್ಯಾನ್ ಹುದ್ದೆಗಳಿಗೆ ಅರ್ಜಿ

ದಾವಣಗೆರೆ, ಡಿ. 14- ಸಿಬ್ಬಂದಿ ನೇಮಕಾತಿ ಆಯೋಗದ (ಎಸ್‍ಎಸ್‍ಸಿ) ವತಿಯಿಂದ ಕೇಂದ್ರ ಸಶಸ್ತ್ರ ಪೊಲೀಸ್ (ಸಿಎಪಿಎಫ್) ಮತ್ತು  ಎಸ್‍ಎಸ್‍ಎಫ್  ಪಡೆಗಳಲ್ಲಿ ಕಾನ್‍ಸ್ಟೇಬಲ್ ಮತ್ತು ಅಸ್ಸಾಂ ರೈಫಲ್‍ನಲ್ಲಿ ರೈಫಲ್ ಮ್ಯಾನ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ವೆಬ್‍ಸೈಟ್  https://ssc.nic.in/” \t “_blank, https://ssc.nic.in or http://www.sskkr.kar.nic.in/” \t “_blank” www.sskkr.kar.nic.in  ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಇದೇ ದಿನಾಂಕ 31 ಕೊನೆಯ ದಿನ. ಅಭ್ಯರ್ಥಿಗಳು 18 ರಿಂದ 23 ವರ್ಷ ವಯೋಮಾನದವರಾಗಿರಬೇಕು, (ಪ.ಜಾತಿ/ಪ.ಪಂಗಡ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ನಿಯಮಾನುಸಾರ ಸಡಿಲಿಕೆ ಇರುತ್ತದೆ).

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ – 08025502520 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದಾವಣಗೆರೆ. ದೂ. ಸಂ : 08192259446 ಸಂಪರ್ಕಿಸಲು ಉದ್ಯೋಗಾಧಿಕಾರಿ ರವೀಂದ್ರ.ಡಿ.ತಿಳಿಸಿದ್ದಾರೆ.

error: Content is protected !!