ನಗರದಲ್ಲಿ ಇಂದು ಯುವಕರಿಗಾಗಿ ಹಿಮೋಫಿಲಿಯಾ ಶಿಬಿರ

ಕರ್ನಾಟಕ ಹಿಮೋಫಿ ಲಿಯಾ ಸೊಸೈಟಿ ವತಿಯಿಂದ ಹಿಮೋಫಿಲಿಯಾ ಮತ್ತು ಇತರೆ ರಕ್ತಸ್ರಾವ ಕಾಯಿಲೆಯಿಂದ ಬಳ ಲುತ್ತಿರುವವರಿಗಾಗಿ ಸೇವೆಯನ್ನು ಸಲ್ಲಿಸುತ್ತಿದ್ದು,  ಹಿಮೋಫಿಲಿಯಾ ಯುವಕರಿಗಾಗಿ ಹಿಮೋಫಿಲಿಯಾ ಶಿಬಿರವನ್ನು ಇಂದು ಮಧ್ಯಾಹ್ನ 1 ಗಂಟೆಗೆ ಆಯೋಜಿಸಲಾಗಿದೆ  

ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ, ಭೌತಿಕ ಚಿಕಿತ್ಸಾ ತರಬೇತಿ, ಮನೋ ಸಾಮಾಜಿಕ ಸಮಸ್ಯೆಗಳು, ಶೈಕ್ಷಣಿಕ ಮಾರ್ಗದರ್ಶನ, ವೃತ್ತಿ ಮಾರ್ಗದರ್ಶನ, ವೈವಾಹಿಕ ಜೀವನ ಬಗ್ಗೆ ಸಲಹೆ, ಸರ್ಕಾರದಿಂದ ಸಿಗುವ ಸಾಮಾಜಿಕ ಸೌಲತ್ತುಗಳ ಬಗ್ಗೆ ಮಾಹಿತಿ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನದ ಮಾಹಿತಿ. 

ಈ ಎಲ್ಲಾ ವಿಷಯಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ 5 ದಿನಗಳ ಮಾಹಿತಿ ಮತ್ತು ತರಬೇತಿ ನೀಡಲಾಗುವುದು. 

error: Content is protected !!