ಇ.ಪಿ.ಎಸ್  ಪಿಂಚಣಿದಾರರು ಜೀವನ್ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

ದಾವಣಗೆರೆ, ಡಿ. 14 – ಇ.ಪಿ.ಎಸ್ 1995ರ ಪಿಂಚಣಿದಾರ ಫಲಾನುಭವಿಗಳು ಪ್ರತಿ ವರ್ಷ ನ. ತಿಂಗಳಿನಲ್ಲಿ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿದ್ದು, ಆದರೆ ಈ ಸಾಲಿನಲ್ಲಿ ಜೀವನ್ ಪ್ರಮಾಣ ಪತ್ರದ ಸಲ್ಲಿಕೆಯಲ್ಲಿನ ವಿಳಂಬವು ಪಿಂಚಣಿಯ ನಿಲುಗಡೆಗೆ ಕಾರಣವಾಗುತ್ತದೆ.  ಇ.ಪಿ.ಎಫ್. ಒಗೆ ಜೀವನ್ ಪ್ರಮಾಣ ಪತ್ರವನ್ನು ವೆಬ್‍ಸೈಟ್ http://jeevanpramaan.gov.in/package/download ಮೂಲಕ ಸಲ್ಲಿಸಿದ ನಂತರ ಬಾಕಿ ಪಿಂಚಣಿಯನ್ನು ಬಿಡುಗಡೆಗೊಳಿಸಲಾಗುತ್ತದೆ.  ಹೆಚ್ಚಿನ ಮಾಹಿತಿಗಾಗಿ ಯುಟ್ಯೂಬ್ ವೀಡಿಯೋ ಲಿಂಕ್  https://youtu.be/dobSgak421Q?si=e VEKWUC JToELdFoU FAT ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಕೆಯ ವಿಧಾನವನ್ನು ತಿಳಿಯ ಬಹುದು ಎಂದು ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.

error: Content is protected !!