ದಾವಣಗೆರೆ, ಡಿ.13- ರಾಜ್ಯದಲ್ಲಿ ಮಳೆಯ ಅಭಾವದಿಂದ ಬರ ಪರಿಸ್ಥಿತಿ ತಲೆದೋರಿದ್ದು, ದಾವಣ ಗೆರೆ ಜಿಲ್ಲೆ ಹೊಸಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಗೋ ಶಾಲೆಗೆ ಹೆಚ್ಚುವರಿ ಮೇವನ್ನು ಸಂಗ್ರಹಿಸಬೇಕಾಗಿರುತ್ತದೆ.
ಜಿಲ್ಲೆಯಲ್ಲಿ ಅಧಿಕ ಮೇವಿನ ದಾಸ್ತಾನಿರುವ ರೈತರು, ಮೇವು ಪೂರೈಕೆದಾರರು ಮೇವನ್ನು ಗೋಶಾಲೆಗೆ ನೀಡಲು ಅವಕಾಶವಿದ್ದು, ಬೇಲು ಮಾಡಿದ ಸ್ಥಿತಿಯಲ್ಲಿ ಒಣಗಿದ ಭತ್ತದ ಹುಲ್ಲು, ಒಣಗಿದ ಮೆಕ್ಕೆಜೋಳದ ಸಪ್ಪೆ, ಬಿಳಿಜೋಳದ ಸಪ್ಪೆ ಮತ್ತು ಒಣಗಿದ ರಾಗಿ ಹುಲ್ಲಿಗೆ ಪ್ರತಿ ಮೆಟ್ರಿಕ್ ಟನ್ ಮೇವಿನ ದರವನ್ನು ನಮೂದಿಸಿ, ಇದೇ ದಿನಾಂಕ 26 ರೊಳಗೆ ಉಪನಿರ್ದೇಶಕರು (ಆಡಳಿತ) ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ದಾವಣಗೆರೆ ಕಚೇರಿಗೆ ಸಲ್ಲಿಸಿದಲ್ಲಿ ಉಪನಿ ರ್ದೇಶಕರು (ಆಡಳಿತ) ಮೇವಿನ ಗುಣಮಟ್ಟವನ್ನು ಪರಿಶೀಲಿಸಿ ಗೋಶಾಲೆಗೆ ಅವಶ್ಯವಿರುವಷ್ಟು ಮೇವನ್ನು ನಿಯಮಾನುಸಾರ ಖರೀದಿಸಲಾಗುವುದು. ಹೊಸಳ್ಳಿ ಗ್ರಾಮದ ಗೋಶಾಲೆಗೆ ಹತ್ತಿರವಿರುವ ರೈತರು ಮತ್ತು ಮೇವು ಪೂರೈಕೆದಾರರಿಗೆ ಆದ್ಯತೆ ನೀಡಲಾಗುವುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಚಂದ್ರಶೇಖರ್ ಸುಂಕದ್ ತಿಳಿಸಿದ್ದಾರೆ.