ರಾಣೇಬೆನ್ನೂರು : ಬಿ.ಎ.ಜೆ.ಎಸ್.ಎಸ್. ಕಾಲೇಜ್‌ಗೆ ಉತ್ತಮ ಫಲಿತಾಂಶ

ರಾಣೇಬೆನ್ನೂರು : ಬಿ.ಎ.ಜೆ.ಎಸ್.ಎಸ್. ಕಾಲೇಜ್‌ಗೆ ಉತ್ತಮ ಫಲಿತಾಂಶ

ರಾಣೇಬೆನ್ನೂರು, ಡಿ. 13 – ನಗರದ ಬಿ.ಎ.ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ 2022-23 ರ ಫಲಿತಾಂಶ ಪ್ರಕಟವಾಗಿದ್ದು, ಕಾಲೇಜ್‌ಗೆ ಶೇ. 96.63  ಫಲಿತಾಂಶ  ಲಭ್ಯವಾಗಿದೆ.

ಕಲಾ ವಿಭಾಗದಲ್ಲಿ  ಯಶೋಧ ಪೂಜಾರ ಶೇ. 88.76 ಪ್ರತಿಶತ ಅಂಕ ಪಡೆದು ಕಾಲೇಜ್‌ಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.  ಶೇ. 87.46 ಪ್ರತಿಶತ ಅಂಕ ಪಡೆದ  ನಂದಿನಿ ತೋಟದ  ದ್ವಿತೀಯ ಹಾಗೂ ಶೇ. 87.23 ಅಂಕ ಪಡೆದ ಅಕ್ಷತಾ ಸೊಪ್ಪಿನ ತೃತೀಯ ಸ್ಥಾನ ಪಡೆದಿರುತ್ತಾರೆ.

ವಾಣಿಜ್ಯ  ವಿಭಾಗದಲ್ಲಿ  ಕುಮಾರಿ ಚೈತ್ರಾ ಅಂತರವಳ್ಳಿ  ಶೇ. 88.93 ಅಂಕ ಪಡೆದು  ಕಾಲೇಜ್‌ಗೆ  ಪ್ರಥಮ ಸ್ಥಾನ ಪಡೆದಿರುತ್ತಾಳೆ. 

ಶೇ. 87.98 ಅಂಕ ಪಡೆದ ದೀಪಾ  ದೇವರಗುಡ್ಡ ದ್ವಿತೀಯ  ಸ್ಥಾನ ಪಡೆದರೆ, ಶೇ. 85.10  ಅಂಕ  ಪಡೆದ ಶ್ವೇತಾ ಮಾಳಗಿ  ತೃತೀಯ ಸ್ಥಾನ  ಪಡೆದಿರುತ್ತಾರೆ.  ಉಳಿದ   ವಿದ್ಯಾರ್ಥಿಗಳು  ಉನ್ನತ ಶ್ರೇಣಿಯಲ್ಲಿ ತೆರ್ಗಡೆಯಾಗಿರುತ್ತಾರೆ. 

ವಿದ್ಯಾರ್ಥಿಗಳ ಈ  ಸಾಧನೆಗೆ  ಸಮೂಹ  ಶಿಕ್ಷಣ ಸಂಸ್ಥೆಗಳ  ಅಧ್ಯಕ್ಷ  ರುದ್ರಪ್ಪ ಎಂ. ಲಮಾಣಿಯವರು, ಕಾರ್ಯದರ್ಶಿ / ಆಡಳಿತಾಧಿಕಾರಿ  ಡಾ. ಆರ್.ಎಂ. ಕುಬೇರಪ್ಪ ಹಾಗೂ ಪ್ರಾಚಾರ್ಯರಾದ  ಡಾ. ಸುರೇಶ ಬಣಕಾರ  ಸೇರಿದಂತೆ  ಇತರರು ಅಭಿನಂದಿಸಿದ್ದಾರೆ.

error: Content is protected !!